ನವದೆಹಲಿ: ಉಕ್ರೈನ್ ವಿರುದ್ಧ ಯುದ್ಧ ಮಾಡಲು ರಷ್ಯಾ ಖಾಸಗಿ ಸೈನಿಕರು ಮತ್ತು ಕೈದಿಗಳನ್ನು ಬಳಸಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದ್ದು, ರಷ್ಯಾ ಹಲವು ಭಾರತೀಯ ಕಾರ್ಮಿಕರನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶ ಕೂಡಾ ಬಹಿರಂಗಗೊಂಡಿದೆ.
ಇ
ದನ್ನೂ ಓದಿ:ಹೊಸಬರಿಗೆ ಟಿಕೆಟ್ ನೀಡಿ… ಚಿಕ್ಕಮಗಳೂರು-ಉಡುಪಿ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರಕ್ಕೆ ಪತ್ರ
ದ ಹಿಂದು ದೈನಿಕ ವರದಿ ಪ್ರಕಾರ, ಸೇನಾ ಭದ್ರತಾ ಸಹಾಯಕ ಹುದ್ದೆ ಎಂದು ನಂಬಿಸಿ ಭಾರತೀಯ ಏಜೆಂಟ್ ಮೂವರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿ ವಂಚಿಸಲಾಗಿತ್ತು. ಈ ಮೂವರನ್ನು ರಷ್ಯಾ ಉಕ್ರೈನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ಬಳಸಿಕೊಂಡಿರುವುದಾಗಿ ವಿವರಿಸಲಾಗಿದೆ.
2023ರ ನವೆಂಬರ್ ಹೊತ್ತಿಗೆ ಅಂದಾಜು 18 ಮಂದಿ ಭಾರತೀಯರನ್ನು ರಷ್ಯಾ ಮತ್ತು ಉಕ್ರೈನ್ ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬರು ಯುದ್ಧದಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ವಂಚನೆಗೊಳಗಾಗಿರುವ ಹೈದರಾಬಾದ್ ನ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಇದೀಗ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಓವೈಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯರು ವಾಪಸ್ ಆಗಲು ನೆರವು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶ, ಗುಜರಾತ್, ಪಂಜಾಬ್ ಮತ್ತು ಜಮ್ಮ-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗದ ಜನರು ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನೆಲ್ಲಾ ಕೂಡಲೇ ರಕ್ಷಣೆ ಮಾಡಿ, ಭಾರತಕ್ಕೆ ವಾಪಸ್ ಕರೆತರಬೇಕ ಎಂದು ಓವೈಸಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.