Advertisement

FIH Pro League: ಹಾಕಿ; ವನಿತೆಯರಿಗೆ ಸತತ 2ನೇ ಸೋಲು

11:01 PM May 25, 2024 | Team Udayavani |

ಅಂಟ್ವೆರ್ಪ್‌ (ಬೆಲ್ಜಿಯಂ): ಯುರೋಪಿಯನ್‌ ಆವೃತ್ತಿಯ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತದ ವನಿತಾ ತಂಡ ಆತಿಥೇಯ ಬೆಲ್ಜಿಯಂ ವಿರುದ್ಧ ಸತತ 2ನೇ ಸೋಲನುಭವಿಸಿದೆ. ಶನಿವಾರದ ಪಂದ್ಯವನ್ನು 1-2 ಅಂತರದಿಂದ ಕಳೆದುಕೊಂಡಿದೆ.

Advertisement

ಮಧ್ಯಾಂತರದ ವೇಳೆ ಬೆಲ್ಜಿಯಂ 2-0 ಮುನ್ನಡೆಯಲ್ಲಿತ್ತು. 34ನೇ ನಿಮಿಷದಲ್ಲಿ ಕುಮಾರಿ ಸಂಗೀತಾ ಭಾರತದ ಏಕೈಕ ಗೋಲನ್ನು ಹೊಡೆದರು.

ನೂತನ ಕೋಚ್‌ ಹರೇಂದ್ರ ಸಿಂಗ್‌ ಮತ್ತು ನೂತನ ನಾಯಕಿ ಸಲೀಮಾ ಟೇಟೆ ಅವರ ಕಾಂಬಿನೇಶನ್‌ ಹೊಂದಿದ್ದ ಭಾರತಕ್ಕೆ ಎದುರಾದ ಸತತ 3ನೇ ಸೋಲು ಇದಾಗಿದೆ. ಬುಧವಾರ ಆರ್ಜೆಂಟೀನಾ 5-0 ಅಂತರದಿಂದ ಭಾರತವನ್ನು ಕೆಡವಿತ್ತು. ಬಳಿಕ ಬೆಲ್ಜಿಯಂ ಎದುರಿನ ಮೊದಲ ಮುಖಾಮುಖೀಯಲ್ಲಿ 0-2 ಅಂತರದ ಸೋಲು ಎದುರಾಗಿತ್ತು. ರವಿವಾರ ಭಾರತ- ಆರ್ಜೆಂಟೀನಾ ಮುಖಾಮುಖಿ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next