Advertisement

ಹಾಕಿ: ಅಂತಿಮ ಪಂದ್ಯ ಡ್ರಾ ಭಾರತದ ವನಿತೆಯರಿಗೆ 3-1 ಸರಣಿ

06:20 AM Mar 12, 2018 | Team Udayavani |

ಸಿಯೋಲ್‌: ಭಾರತ-ದಕ್ಷಿಣ ಕೊರಿಯಾ ವನಿತಾ ಹಾಕಿ ಸರಣಿಯ ಕೊನೆಯ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ ತಂಡ 5 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು.

Advertisement

ರವಿವಾರದ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಹೋರಾಟ ನಡೆಯಿತು. ಮೊದಲನೇ ಅವಧಿಯಲ್ಲಿ ಎರಡೂ ತಂಡಗಳ ಆಟಗಾರ್ತಿಯರು ಗೋಲು ದಾಖಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

2ನೇ ಅವಧಿಯಲ್ಲಿ ಇತ್ತಂಡಗಳ ಆಟ ಇನ್ನಷ್ಟು ಚುರುಕುಗೊಂಡಿತು. ಇದರ ಫ‌ಲವಾಗಿ 48ನೇ ನಿಮಿಷದಲ್ಲಿ ಭಾರತದ ವಂದನಾ ಕಟಾರಿಯಾ ಗೋಲು ಬಾರಿಸಿದರು. ಆದರೆ ಈ ಮೇಲುಗೈ ಬಹಳ ಹೊತ್ತು ಉಳಿಯಲಿಲ್ಲ. ಎರಡೇ ನಿಮಿಷದ ಅಂತರದಲ್ಲಿ ಕೊರಿಯಾದ ಬೊಮಿ ಕಿಮ್‌ ಗೋಲೊಂದನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಬಳಿಕ ಯಾವುದೇ ಗೋಲು ದಾಖಲಾಗಲಿಲ್ಲ. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next