Advertisement
ಸರಣಿಯಲ್ಲಿ ಒಂದು ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಮಿಥಾಲಿ ರಾಜ್, ಟಿ20 ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುವರು. ಮುಂದಿನ ಫೆಬ್ರವರಿಯಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾಗಿದೆ.
ತವರಿನ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಅವಕಾಶ ವಂಚಿತರಾಗಿದ್ದ ಅನುಭವಿ ಪೇಸ್ ಬೌಲರ್ ಶಿಖಾ ಪಾಂಡೆ ತಂಡಕ್ಕೆ ವಾಪಸಾಗಿದ್ದಾರೆ. ತನಿಯಾ ಭಾಟಿಯಾ ಜತೆಗೆ ಹೆಚ್ಚುವರಿ ಕೀಪರ್ ಆಗಿ ಜಾರ್ಖಂಡ್‌ನ ಇಂದ್ರಾಣಿ ರಾಯ್ ಅವರನ್ನು ಆರಿಸಲಾಗಿದೆ. ಇಂದ್ರಾಣಿ ಈ ತಂಡದ ಏಕೈಕ ಹೊಸ ಮುಖವಾಗಿದ್ದಾರೆ. ವನಿತಾ ತಂಡದ ಕೋಚ್ ಆಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ರಮೇಶ್ ಪೊವಾರ್ ಅವರಿಗೆ ಆರಂಭದಲ್ಲೇ ಅಗ್ನಿಪರೀಕ್ಷೆ ಎದುರಾಗಿದೆ.
Related Articles
ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಪ್ರಿಯಾ ಪುನಿಯ, ದೀಪ್ತಿ ಶರ್ಮ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ಸ್ನೇಹಾ ರಾಣಾ, ತನಿಯಾ ಭಾಟಿಯಾ, ಇಂದ್ರಾಣಿ ರಾಯ್, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಷ್ಟ್, ರಾಧಾ ಯಾದವ್.
Advertisement