ಅಲಹಾಬಾದ್: “ಭಾರತೀಯ ಮಹಿಳೆಯರು ತಮ್ಮ ಪತಿಯರ ಮೇಲೆ ಹಕ್ಕು ಸ್ಥಾಪಿಸುತ್ತಾರೆ. ಜತೆಗೆ ಪತಿಯನ್ನು ಇತರರ ಜತೆಗೆ ಹಂಚಿಕೊಳ್ಳಲೂ ಬಯಸುವುದಿಲ್ಲ’ ಹೀಗೆಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಿಳೆಯ ಆತ್ಮಹತ್ಯೆಗೆ ಪತಿಯೇ ಕಾರಣ ಎಂದು ಕೆಳಹಂತದ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ.ರಾಹುಲ್ ಚತುರ್ವೇದಿ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನ ಪತಿ ರಹಸ್ಯವಾಗಿ ಇನ್ನೊಂದು ಮದುವೆಯಾಗಿದ್ದಾನೆ ಎಂಬುದೇ ಪತ್ನಿಯ ಆತ್ಮಹತ್ಯೆಗೆ ಸೂಕ್ತ ಕಾರಣವೇ ಆಗುತ್ತದೆ ಎಂದೂ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:ಬಿಟ್ ಕಾಯಿನ್: ತನಿಖೆ ಚುರುಕಾದ್ರೆ ಸಿಎಂ ಬದಲಾವಣೆ; ಪ್ರಿಯಾಂಕ್ ಖರ್ಗೆ
“ಭಾರತೀಯ ಮಹಿಳೆಯರು ಪತಿಯ ಮೇಲೆ ಅಪಾರ ಪ್ರೀತಿ ಮತ್ತು ಹಕ್ಕು ಸ್ಥಾಪಿಸುತ್ತಾರೆ. ಪತಿ ಮತ್ತೂಬ್ಬ ಮಹಿಳೆಯೊಂದಿಗೆ ಮದುವೆಯಾಗುತ್ತಾನೆ ಅಥವಾ ಮತ್ತೂಬ್ಬಳ ಜತೆಗೆ ಇರುತ್ತಾನೆ ಎಂದಾದರೆ ಅದು ಮಹಿಳೆಯ ವೈವಾಹಿಕ ಜೀವನಕ್ಕೆ ದೊಡ್ಡ ಹಿನ್ನೆಡೆ.
ಇಂಥ ಸಂಕಷ್ಟಮಯ ಸನ್ನಿವೇಶದಲ್ಲಿ ಮಹಿಳೆ ಸಂಯಮ ತಾಳಿಕೊಳ್ಳಬೇಕು ಎಂದರೆ ಕಷ್ಟವಾಗುತ್ತದೆ. ಅದೇ ಈ ಪ್ರಕರಣದಲ್ಲಿ ನಡೆದಿದೆ’ ಎಂದು ನ್ಯಾಯಪೀಠ ಹೇಳಿದೆ.