Advertisement

ಅಮೆರಿಕ :ಎರಡು ಸ್ಥಳೀಯ ಕೋರ್ಟ್ ಗಳಿಗೆ ಭಾರತೀಯ ಮಹಿಳೆಯರ ನೇಮಕ

09:47 AM Jan 08, 2020 | Hari Prasad |

ನ್ಯೂಯಾರ್ಕ್‌: ಅಮೆರಿಕದ ಎರಡು ಸ್ಥಳೀಯ ಕೋರ್ಟ್‌ ಗಳಿಗೆ ಭಾರತೀಯ ಮೂಲದ ಮಹಿಳೆಯರನ್ನು ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡಲಾಗಿದೆ. ಅಪರಾಧ ಪ್ರಕರಣಗಳ ವಿಚಾರಣೆ ನಡೆಸುವ ಕೋರ್ಟ್‌ಗೆ ನ್ಯಾ.ಅರ್ಚನಾ ರಾವ್‌, ಸಿವಿಲ್‌ ಕೋರ್ಟ್‌ಗೆ ನ್ಯಾ.ದೀಪಾ ಅಂಬೇಕರ್‌ರನ್ನು ನ್ಯೂಯಾರ್ಕ್‌ ನಗರದ ಮೇಯರ್‌ ಬಿಲ್‌ ಡೆ ಬಾಲ್ಸಿಯೋ ನೇಮಿಸಿದ್ದಾರೆ.

Advertisement

ಕಳೆದ ಜನವರಿಯಲ್ಲಿ ರಾವ್‌ ಅವರನ್ನು ಸಿವಿಲ್‌ ಕೋರ್ಟ್‌ನ ಹಂಗಾಮಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಇದಕ್ಕಿಂತ ಮೊದಲು ನ್ಯೂಯಾರ್ಕ್‌ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next