ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ಪಟುಗಳ ಆಸೆ ನುಚ್ಚುನೂರಾಗಿದೆ. ಇಂಗ್ಲಂಡ್ ತಂಡ ನೀಡಿದ 228 ರನ್ನುಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದ ಭಾರತೀಯ ಮಹಿಳಾ ದಾಂಢಿಗರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಆತಿಥೇಯರಿಗೆ 9 ರನ್ನುಗಳಿಂದ ಶರಣಾದರು.
Advertisement
48ನೇ ಓವರಿನ ತನಕ ರೋಮಾಂಚಕವಾಗಿ ಸಾಗಿದ ಇಂದಿನ ಈ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಇಂಗ್ಲಂಡ್ ವನಿತೆಯರು ಮಿಥಾಲಿ ಪಡೆ ವಿರುದ್ಧ ತಿರುಗಿಬಿದ್ದಿದ್ದು ವಿಶೇಷವಾಗಿತ್ತು. ಭಾರತಕ್ಕೆ ಪೂನಂ ರಾವತ್ (86) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿಫೈನಲ್ ಪಂದ್ಯದ ಹೀರೋಯಿನ್ ಹರ್ಮಾನ್ ಪ್ರೀತ್ ಕೌರ್ (51) ಮತ್ತು ವೇದ ಕೃಷ್ಣಮೂರ್ತಿ (35) ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ನುಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವಿಗೆ 229 ರನ್‌ಗಳ ಗುರಿ ನೀಡಿದೆ. 10 ಓವರ್‌ಗಳವರೆಗೆ ರಕ್ಷಣಾತ್ಮಕ ಆಟವಾಡಿದ ಇಂಗ್ಲೆಂಡ್ 11 ನೇ ರಾಜೇಶ್ವರಿ ಗಾಯಕ್‌ವಾಡ್ ಎಸೆದ 11 ನೇ ಓವರ್‌ನಲ್ಲಿ 24 ರನ್‌ಗಳಿಸಿದ್ದ ವಿನಿಫೀಲ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಭಾರತ ಪರ ಜೂಲನ್ ಗೋಸ್ವಾಮಿ 3 ವಿಕೆಟ್ ಪಡೆದು ಮಿಂಚಿದರೆ ಪೂನಂ ಯಾದವ್ 2 ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು. ಇಂಗ್ಲೆಂಡ್ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228ರನ್‌ಗಳಿಸಿದೆ. 6 ಬಾರಿಯ ಚಾಂಪಿಯನ್ ಆಸಿಸ್ ಮಣಿಸಿ ಫೈನಲ್‌ಗೇರಿದ ಭಾರತ ಮೊದಲ ಬಾರಿ ಕಪ್ ಗೆಲ್ಲುವ ಛಲದಲ್ಲಿದ್ದರೆ, ಇಂಗ್ಲೆಂಡ್ 4 ನೇ ಬಾರಿ ಕಪ್ ಗೆಲ್ಲುವ ತವಕದಲ್ಲಿದೆ.
Related Articles
ಮಿಥಾಲಿ ರಾಜ್ ನಾಯಕತ್ವದ ಆಡುವ 11ರ ಬಳಗದಲ್ಲಿ ಇಬ್ಬರು ಕನ್ನಡತಿಯರಿದ್ದು ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್, ಉತ್ತಮ ಫಾರ್ಮ್ನಲ್ಲಿದ್ದಾರೆ. ಇಬ್ಬರಿಗೂ ನಾಡಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದ್ದಾರೆ.
Advertisement
ಸ್ಕೋರ್ಪಟ್ಟಿಇಂಗ್ಲೆಂಡ್
ಲಾರೆನ್ ವಿನ್‌ಫೀಲ್ಡ್ ಬಿ ರಾಜೇಶ್ವರಿ 24
ಟಾಮಿ ಬೇಮಾಂಟ್ ಸಿ ಜೂಲನ್ ಬಿ ಪೂನಂ 23
ಸಾರಾ ಟಯ್ಲರ್ ಸಿ ಸುಷ್ಮಾ ಬಿ ಜೂಲನ್ 45
ಹೀತರ್ ನೈಟ್ ಎಲ್‌ಬಿಡಬ್ಲ್ಯು ಪೂನಂ 1
ನಥಾಲಿ ಶಿವರ್ ಎಲ್‌ಬಿಡಬ್ಲ್ಯು ಜೂಲನ್ 51
ಫ್ರಾನ್ ವಿಲ್ಸನ್ ಎಲ್‌ಬಿಡಬ್ಲ್ಯು ಜೂಲನ್ 0
ಕ್ಯಾಥರಿನ್ ಬ್ರಂಟ್ ರನೌಟ್ 34
ಜೆನ್ನಿ ಗನ್ ಔಟಾಗದೆ 25
ಲಾರಾ ಮಾರ್ಷ್ ಔಟಾಗದೆ 14 ಇತರ 11
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 228
ವಿಕೆಟ್ ಪತನ: 1-47, 2-60, 3-63, 4-146, 5-146, 6-164, 7-196. ಬೌಲಿಂಗ್:
ಜೂಲನ್ ಗೋಸ್ವಾಮಿ 10-3-23-3
ಶಿಖಾ ಪಾಂಡೆ 7-0-53-0
ರಾಜೇಶ್ವರಿ ಗಾಯಕ್ವಾಡ್ 10-1-49-1
ದೀಪ್ತಿ ಶರ್ಮ 9-0-39-0
ಪೂನಂ ಯಾದವ್ 10-0-36-2
ಹರ್ಮನ್‌ಪ್ರೀತ್ ಕೌರ್ 4-0-25-0