Advertisement

ಉಸ್ಮಾಗೆ ಭಾರತಕ್ಕೆ ಮರಳಲು ಪಾಕ್‌ ಕೋರ್ಟ್‌ ಅನುಮತಿ

01:52 AM May 25, 2017 | Karthik A |

ಇಸ್ಲಾಮಾಬಾದ್‌: ಭಾರತಕ್ಕೆ ಹೋಗಲು ಅನುವು ಮಾಡಿ ಎಂದು ಪಾಕಿಸ್ಥಾನದ ಭಾರತೀಯ ಹೈಕಮಿಷನರ್‌ ಕಚೇರಿಯಲ್ಲೇ ಆಶ್ರಯ ಪಡೆದಿದ್ದ ದೆಹಲಿ ಮಹಿಳೆ ಉಸ್ಮಾಗೆ ತವರಿಗೆ ಮರಳಲು ಇಲ್ಲಿನ ಹೈಕೋರ್ಟ್‌ ಅನುಮತಿ ನೀಡಿದೆ. ಜೊತೆಗೆ ವಾಘಾ ಗಡಿವರೆಗೂ ಅವರಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿದೆ. ಮೇ 3 ರಂದು ಪಾಕಿಸ್ಥಾನದ ತಾಹಿರ್‌ ಅಲಿ ಇವರನ್ನು ವಿವಾಹವಾಗಿದ್ದರು. ಆದರೆ ತಾಹಿರ್‌ ಬಂದೂಕು ತೋರಿಸಿ ಮದುವೆಯಾದರು ಎಂದು ಉಸ್ಮಾ ಆರೋಪಿಸಿದ್ದರು. ಜತೆಗೆ ಭಾರತದಲ್ಲಿರುವ ತನ್ನ ಮಗು ಥಾಲಸ್ಸೇಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದೆ. ಮಗುವಿಗೆ ನನ್ನ ಅಗತ್ಯವಿರುವುದರಿಂದ ನನಗೆ ಭಾರತಕ್ಕೆ ಮರಳಲು ಅನುಮತಿ ನೀಡಿ ಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next