ಮುಂಬೈ: ಶುಕ್ರವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಂಪೂರ್ಣ ಫಿಟ್ ಆಗಲಿ ಕ್ರಿಕೆಟ್ ಆಡಲು ಸುಮಾರು ತಿಂಗಳು ಬೇಕಾಗಬಹುದು.
ಮುಂದಿನ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ರಿಷಭ್ ಪಂತ್ ಅವರನ್ನು ಕೈಬಿಡಲಾಗಿತ್ತು. ಅವರ ಬದಲಿಗೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಗಳಾಗಿ ನೇಮಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ 3.30 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ; ಸಚಿವ ಜೆ.ಸಿ.ಮಾಧುಸ್ವಾಮಿ
ಮುಂದಿನ ದಿನಗಳಲ್ಲಿ ಹೆಚ್ಚಾಗಿ ಏಕದಿನ ಪಂದ್ಯಗಳು ನಡೆಯುವ ಕಾರಣ ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಪಂತ್ ಬದಲಿಗೆ ಬೇರೆ ವಿಕೆಟ್ ಕೀಪರ್ ರನ್ನು ಬೆಳೆಸಬೇಕಾಗಿದೆ.
ಸದ್ಯ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಶ್ರೀಕರ್ ಭರತ್ ಅವರುಗಳು ಪಂತ್ ಬದಲಿಗೆ ಹೆಚ್ಚಾಗಿ ಅವಕಾಶ ಪಡೆಯಬಹುದು. ಅದರಲ್ಲೂ ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಭರತ್ ಅವರೇ ವಿಕೆಟ್ ಕೀಪರ್ ಆಗಬಹುದು.