Advertisement
ಕಳೆದ ವರ್ಷ ಪ್ರಜ್ಞೆಶ್ “ಸ್ಟಟ್‌ಗಾರ್ಟ್ ಓಪನ್’ ಕೂಟದಲ್ಲಿ ಅಂದಿನ 23ನೇ ರ್‍ಯಾಂಕಿನ ಡೆನ್ನಿಸ್ ಶಪೊವಲೋವ್ ಅವರನ್ನು ಸೋಲಿಸಿ ವೃತ್ತಿ ಜೀವನದ ಪ್ರಮುಖ ಜಯ ದಾಖಲಿಸಿದ್ದರು. ಮೊದಲ ಸೆಟ್‌ನ ಆರಂಭದಲ್ಲಿ ಮುನ್ನಡೆಯಲ್ಲಿದ್ದ ಪ್ರಜ್ಞೆàಶ್‌ಗೆ ಪೇರ್ ತಕ್ಕ ಮಟ್ಟಿನ ಪೈಪೋಟಿ ನೀಡಿದರು. ಟೈ ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದ ಪ್ರಜ್ಞೆಶ್ ಇದನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ದ್ವಿತೀಯ ಸೆಟ್‌ನ ಆರಂಭದಲ್ಲಿ ಇವರಿಬ್ಬರ ನಡುವೆ ಬಿರುಸಿನ ಪೈಪೋಟಿ ನಡೆಯಿತಾದರೂ ಪ್ರಜ್ಞೆàಶ್‌ಗೆ ಅದೃಷ್ಟ ಒಲಿಯಿತು. ದ್ವಿತೀಯ ಸುತ್ತಿನಲ್ಲಿ ಪ್ರಜ್ಞೆàಶ್ ಜಾರ್ಜಿಯಾದ ನಿಕೋಸ್ ಬಾಸಿಲಸ್ವಿಲಿ ಅವರನ್ನು ಎದುರಿಸಲಿದ್ದಾರೆ. ಈ ಗೆಲುವಿನಿಂದ 41 ಅಂಕಗಳಿಸಿರುವ ಪ್ರಜ್ಞೆಶ್ ಮುಂದಿನ ರ್‍ಯಾಂಕಿಂಗ್‌ನಲ್ಲಿ 80ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ.
“ಇದು ನನ್ನ ಜೀವನದ ಮಹತ್ತರ ಗೆಲುವು. ಈ ಜಯ ಉತ್ತಮ ಸಂದರ್ಭದಲ್ಲಿ ಒಲಿದಿದೆ. ಇದರಿಂದ ವಿಂಬಲ್ಡನ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ಹತ್ತಿರವಾಗಿದ್ದೇನೆ. ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡುಕೊಳ್ಳುತ್ತಿದ್ದೇನೆ’ ಎಂದು ಪ್ರಜ್ಞೆಶ್ ಪ್ರತಿಕ್ರಿಯಿಸಿದ್ದಾರೆ.