Advertisement
ಪುರುಷರ ವಿಭಾಗದ ಫೈನಲ್‌ನಲ್ಲಿ ಥೀಮ್, 5 ಬಾರಿಯ ಇಂಡಿಯನ್ ವೆಲ್ಸ್ ಚಾಂಪಿಯನ್, ಸ್ವಿಜರ್‌ಲ್ಯಾಂಡಿನ ರೋಜರ್ ಫೆಡರರ್ ವಿರುದ್ಧ 3-6, 6-3, 7-5 ಸೆಟ್‌ಗಳ ಗೆಲುವು ದಾಖಲಿಸಿದರು. ವನಿತೆಯರ ವಿಭಾಗದ ಪ್ರಶಸ್ತಿ ಕಾದಾಟದಲ್ಲಿ ಬಿಯಾಂಕಾ 3 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್, ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರನ್ನು 6-4, 3-6, 6-4 ಸೆಟ್‌ಗಳಿಂದ ಸೋಲಿಸಿದರು.ಫೆಡರರ್‌ಗೆ ಆಘಾತ
6ನೇ ಇಂಡಿಯನ್ ವೆಲ್ಸ್ ಪ್ರಶಸ್ತಿ ಮತ್ತು 101ನೇ ಜಯದ ನಿರೀಕ್ಷೆಯಲ್ಲಿದ್ದ ಫೆಡರರ್‌ಗೆ ಥೀಮ್ ಭಾರೀ ಆಘಾತ ನೀಡಿದರು. ಮೊದಲ ಸೆಟ್ ಸುಲಭವಾಗಿ ಜಯಿಸಿದ ಫೆಡರರ್ ಉತ್ತಮ ಲಯದಲ್ಲಿದ್ದಂತೆ ಕಂಡುಬಂದರು. ಆದರೆ ದ್ವಿತೀಯ ಸೆಟ್‌ನಲ್ಲಿ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ನಿರ್ಣಾಯಕ ಸೆಟ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದರೂ ಥೀಮ್ 7-5 ಅಂಕಗಳ ಅಂತರದಿಂದ ಗೆದ್ದು ಮೊದಲ ಎಟಿಪಿ ಮಾಸ್ಟರ್ ಪ್ರಶಸ್ತಿ ಜಯಿಸಿದರು. ಈ ಗೆಲುವಿನಿಂದ ಥೀಮ್ ನೂತನ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಮೇಲಕ್ಕೇರಿ ವೃತ್ತಿಜೀವನದ ಶ್ರೇಷ್ಠ ರ್‍ಯಾಂಕಿಂಗ್ ಸಂಪಾದಿಸಿದರು (4).