Advertisement

ಇಂಡಿಯನ್‌ ವೆಲ್ಸ್‌ ಟೆನಿಸ್‌: ಫೆಡರರ್‌-ಕೊರಿಕ್‌  ಸೆಮಿಫೈನಲ್‌

06:00 AM Mar 17, 2018 | Team Udayavani |

ಇಂಡಿಯನ್‌ ವೆಲ್ಸ್‌: ವಿಶ್ವದ ನಂಬರ್‌ ವನ್‌ ಆಟಗಾರ ರೋಜರ್‌ ಫೆಡರರ್‌ ಮತ್ತು ಕ್ರೊವೇಶಿಯಾದ ಬೋರ್ನ ಕೋರಿಕ್‌ ಇಂಡಿಯನ್‌ ವೆಲ್ಸ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. 

Advertisement

ಗುರುವಾರ ರಾತ್ರಿಯ ಕ್ವಾರ್ಟರ್‌ ಫೈನಲ್‌ನಲ್ಲಿ ರೋಜರ್‌ ಫೆಡರರ್‌ ದಕ್ಷಿಣ ಕೊರಿಯಾದ ಹಿಯಾನ್‌ ಚುಂಗ್‌ ಅವರನ್ನು 7-5, 6-1 ಅಂತರದಿಂದ ಮಣಿಸಿದರು. ಬೋರ್ನ ಕೋರಿಕ್‌ 7ನೇ ಶ್ರೇಯಾಂಕದ ಕೆವಿನ್‌ ಆ್ಯಂಡರ್ಸನ್‌ ವಿರುದ್ಧ 3 ಸೆಟ್‌ಗಳ ಕಾದಾಟದ ಬಳಿಕ ಗೆಲುವನ್ನು ಆಚರಿಸಿದರು. ಅಂತರ 2-6, 6-4, 7-6 (7-3). ಇದರೊಂದಿಗೆ ಫೆಡರರ್‌ ಅವರ ಈ ವರ್ಷದ ಸತತ ಗೆಲುವಿನ ಅಂತರ 16 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿತು. ಅವರೀಗ 2006ರ ಋತುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೆ ಫೆಡರರ್‌ ನೂತನ ದಾಖಲೆ ಸ್ಥಾಪಿಸಿದಂತಾಗುತ್ತದೆ. ಸೆಮಿಫೈನಲ್‌ ಪ್ರವೇಶದಿಂದಾಗಿ ಫೆಡರರ್‌ ಅವರ ನಂ.1 ರ್‍ಯಾಂಕಿಂಗ್‌ ಕೂಡ ಗಟ್ಟಿಯಾಗಲಿದೆ.

ಚುಂಗ್‌ ಈ ವರ್ಷದ 21 ಪಂದ್ಯಗಳಲ್ಲಿ ಆರನ್ನು ಕಳೆದುಕೊಂಡರು. ಇದು 2018ರ 6 ಕೂಟಗಳಲ್ಲಿ ಚುಂಗ್‌ ಕಂಡ 5ನೇ ಕ್ವಾರ್ಟರ್‌ ಫೈನಲ್‌ ಆಗಿತ್ತು. ಈ ಸಾಧನೆಯಿಂದಾಗಿ ಚುಂಗ್‌ ಈಗ ಏಶ್ಯದ ನಂ.1 ಟೆನಿಸಿಗನಾಗಿ ಮೂಡಿಬರಲಿದ್ದಾರೆ. 2011ರಿಂದಲೂ ಈ ಸ್ಥಾನದಲ್ಲಿ ಕೀ ನಿಶಿಕೊರಿ ಅವರೇ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next