Advertisement
ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಾರತೀಯ ಸೇನೆಯ ಮುಂಚೂಣಿ ನೆಲೆಗಳು, ಗಡಿ ಗ್ರಾಮ ಗಳನ್ನು ಗುರಿಯಾಗಿಸಿ ಪಾಕ್ ಸೇನೆ ನಡೆಸುತ್ತಿರುವ ದಾಳಿಗೆ ಈ ತಿಂಗಳೊಂದರಲ್ಲೇ ಮೂವರು ಯೋಧರು ಬಲಿಯಾದಂತಾಗಿದೆ. ಶನಿವಾರ ರಾತ್ರಿ ಶಾಪುರ್ – ಕೆರ್ನಿ ವಲಯದಲ್ಲಿ ಮತ್ತೆ ದಾಳಿ ನಡೆ ದಿದ್ದು, ಭಾರ ತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಗುಂಡಿನ ದಾಳಿ ಯಿಂದ ಮೂವರು ಯೋಧರು ಗಾಯಗೊಂಡಿದ್ದು, ಅವ ರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದಾರಿ ಮಧ್ಯೆ ಒಬ್ಬ ಯೋಧ ಅಸು ನೀಗಿದ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.ರವಿವಾರ ಬೆಳಗ್ಗೆಯೂ ಬಾರಾ ಮುಲ್ಲಾ ಜಿಲ್ಲೆಯ ರಾಂಪುರ ವಲಯ ದಲ್ಲಿ ಪಾಕ್ ಪಡೆ ಶೆಲ್ ದಾಳಿ ಮುಂದುವರಿಸಿದ್ದು, ಎರಡೂ ಕಡೆ ಸ್ವಲ್ಪ ಕಾಲ ಗುಂಡಿನ ಚಕಮಕಿ ನಡೆದಿದೆ.
ಪ್ರಸಕ್ತ ವರ್ಷದ ಆರಂಭದಿಂದ ಜೂನ್ 10ರ ವರೆಗೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕ್ ಸೇನೆಯು ಬರೋಬ್ಬರಿ 2,027 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿ ಸಿದರೆ ಈ ವರ್ಷ ಪಾಕ್ ಪಡೆಯ ದಾಳಿಯ ಪ್ರಮಾಣ ಶೇ.69 ರಷ್ಟು ಹೆಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಣಿವೆ ರಾಜ್ಯ ದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ರನ್ನು ಭಾರತದೊಳಕ್ಕೆ ನುಸುಳಿಸುವ ಕುತಂತ್ರದ ಭಾಗವಾಗಿ ಪಾಕ್ ಈ ರೀತಿ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದೆ. ಉಗ್ರರ ನುಸುಳುವಿಕೆಗೆ ನೆರವಾಗಲು ಅವರಿಗೆ ಗುರಾಣಿಯಾಗಿ ನಿಂತು ಪಾಕ್ ಪಡೆ ಇಂಥ ಕುಕೃತ್ಯ ಎಸಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2019ರಲ್ಲಿ 3,168 ಬಾರಿ ಪಾಕ್ ಸೇನೆಯು ಗುಂಡಿನ ದಾಳಿ ನಡೆಸಿತ್ತು. 2018ರಲ್ಲಿ ಈ ಸಂಖ್ಯೆ 1,629 ಆಗಿತ್ತು. ಆದರೆ ಈ ವರ್ಷದ ಮೊದಲ 6 ತಿಂಗ ಳಲ್ಲೇ 2,027 ಬಾರಿ ದಾಳಿ ನಡೆಸಲಾಗಿದೆ. ಈ ಪೈಕಿ ಮಾರ್ಚ್ ತಿಂಗಳೊಂದರಲ್ಲೇ ಅತ್ಯಧಿಕ ಅಂದರೆ, 411 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಸೇನೆ ತಿಳಿಸಿದೆ.