Advertisement
ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶ ವನ್ನು ಈಡೇರಿಸುವುದಕ್ಕಾಗಿ ಜನರು ಹೆಚ್ಚಿನ ರೀತಿಯಲ್ಲಿ ಗ್ರಾಮ ಸ್ವರಾಜ್‌ನ ಸ್ಥಳೀಯ ಸ್ವಯಂ ಆಡಳಿತದಲ್ಲಿ ಭಾಗವಹಿಸಲು ಗ್ರಾಮ, ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಸ್ಥಾಪನೆ.
Related Articles
Advertisement
ಆರ್ಥಿಕ ಪ್ರಗತಿ, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸಾಮಾಜಿಕವಾಗಿ ವಂಚಿತರಾದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು. ಆರ್ಥಿಕ ಚಟುವಟಿಕೆಗಳ ಮೂಲಕ ಗ್ರಾಮೀಣ ಜನತೆಗೆ ಪರ್ಯಾಯ ಆದಾಯ ಮೂಲಗಳನ್ನು ಕಲ್ಪಿಸುವುದು. ಮೂಲ ಸೌಕರ್ಯಗಳನ್ನು ಒದಗಿಸಿ ಜನರ ಜೀವನ ಮಟ್ಟದಲ್ಲಿ ಸುಧಾರಣೆ.
ಸೃಜನಶೀಲ, ಹೆಮ್ಮೆಯ, ಸ್ವಾವಲಂಬಿ, ಸಂಪದ್ಭರಿತ ಮತ್ತು ಸಾಮರಸ್ಯ ಸಮಾಜ ನಿರ್ಮಾಣ.
ಜನಸವತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ಸ್ಥಾಪನೆಗೆ ವೇದಿಕೆಗಳನ್ನಾಗಿ ಬಳಸಿಕೊಳ್ಳುವುದು.
ಎಲ್ಲರಿಗೂ ಶುದ್ಧ ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಸಮುದಾಯದ ಜೀವನಮಟ್ಟ ಸುಧಾರಣೆ.
ಅಗತ್ಯ ಗ್ರಾಮೀಣ ಸೌಲಭ್ಯಗಳನ್ನು ಒದಗಿಸಿ ಗ್ರಾಮೀಣ ಸಮುದಾಯಗಳು ಮತ್ತು ಸಂಘಟನೆಗಳು ಗ್ರಾಮದ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು.
ಗ್ರಾಮ ವಾಸಿಗಳ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಗುಣಮಟ್ಟವನ್ನು ವೃದ್ಧಿಸುವುದಕ್ಕಾಗಿ ಆಸ್ತಿಗಳ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ ಗಾಗಿ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಮುದಾ ಯವನ್ನು ತೊಡಗಿಸಿಕೊಳ್ಳುವುದು.
ಪಂಚಾಯತ್ ಅಧೀನದಲ್ಲಿರುವ ಸಂಪನ್ಮೂಲ ಗಳನ್ನು ಬಳಕೆ ಮಾಡಿಕೊಂಡು ಪಂಚಾಯತ್ ವ್ಯಾಪ್ತಿಯ ಅರಣ್ಯ ಮತ್ತು ವನ್ಯಜೀವಿಗಳ ಸುಸ್ಥಿರ ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗಾಗಿ ಅವುಗಳನ್ನು ಸಂರಕ್ಷಣೆ.
ಸ್ಥಳೀಯ ಸಮುದಾಯ ಕಲೆ, ಸಂಸ್ಕೃತಿ, ಪರಂಪರೆ ಗಳನ್ನು ರಕ್ಷಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ.
ನವಣೆ, ಸಜ್ಜೆ, ಬಿಳಿ ಜೋಳ, ಸಾಮೆ, ಸಾವೆ, ಕೋರ್ಲಿ ಇತ್ಯಾದಿ ಮತ್ತು ಔಷಧೀಯ ಮೌಲ್ಯವುಳ್ಳ ಗಿಡಮೂಲಿಕೆಗಳಂತಹ ದೇಸಿ ವೈವಿಧ್ಯವುಳ್ಳ ಬೀಜಗಳ ಸಂರಕ್ಷಣೆ ಮತ್ತು ಅಭಿವೃದ್ಧಿ.
ಕೃಷಿ-ಕೈಗಾರಿಕೆ ಕೇಂದ್ರಗಳನ್ನು ಗ್ರಾಮೀಣ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ಉದ್ಯೋಗಳನ್ನು ಸೃಷ್ಟಿ ಮಾಡುವುದು ಮತ್ತು ಕೈಗಾರಿಕೆ-ವಾಣಿಜ್ಯ ಚಟುವಟಿಕೆಗಳ ಅರ್ಜಿ ಸ್ವೀಕಾರಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿ.
ರಾಷ್ಟ್ರೀಯ ಮತ್ತು ರಾಜ್ಯ ಕಾರ್ಯ ನೀತಿಗಳಿಗೆ ಅನುಸಾರವಾಗಿ ತಳಮಟ್ಟದಲ್ಲಿ ಸಹಕಾರಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಹಕಾರಿ ಮನೋಭಾವ ಮತ್ತು ವಾತಾವರಣ ನಿರ್ಮಾಣ.
ಗ್ರಾಮೀಣ ಪ್ರದೇಶಗಳಲ್ಲಿನ ಕೌಶಲ, ಜ್ಞಾನ, ಇತರ ಸಾಮರ್ಥಯಗಳಿಗೆ ಅನುಗುಣವಾಗಿ ಗ್ರಾಮೀಣ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಶಕ್ತೀಕರಣ.
ಶಾಂತಿಯುತ ಸಮಾಜ ಮತ್ತು ಕೋಮು ಸೌಹಾರ್ದವನ್ನು ಸಂರಕ್ಷಿಸುವ ಹಾಗೂ ಎಲ್ಲ ರೀತಿಯ ಹಿಂಸೆಗಳನ್ನು ತಡೆಗಟ್ಟುವ ಸುರಕ್ಷಿತ ಮತ್ತು ಸಹನಶೀಲ ಸಮುದಾಯವನ್ನು ಪೋಷಿಸುವುದು.
ಗ್ರಾಮಗಳಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುವ ಬೆಳವಣಿಗೆಗಳು ನಡೆದಾಗ ಅವುಗಳನ್ನು ತಡೆಗಟ್ಟಬೇಕು. ಸಾಲಬಾಧೆ, ಬಡತನ ಮತ್ತಿತರ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು.