ನವದೆಹಲಿ:ʻನ್ಯಾಷನಲ್ ಜಿಯೋಗ್ರಾಫಿಕ್ʼ ಕೊಡಮಾಡುವ ಪ್ರತಿಷ್ಠಿತ ʻವರ್ಷದ ಚಿತ್ರʼ ಭಾರತೀಯ ಮೂಲದ ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಇಂಜಿನೀಯರ್ ಕಾರ್ತಿಕ್ ಸುಬ್ರಮಣ್ಯಂ ಅವರ ಪಾಲಾಗಿದೆ.
ಅವರು ಕ್ಲಿಕ್ಕಿಸಿದ ʻಡ್ಯಾನ್ಸ್ ಆಫ್ ದಿ ಈಗಲ್ʼ ಹೆಸರಿನ ಛಾಯಾಚಿತ್ರವು ʻನ್ಯಾಷನಲ್ ಜಿಯೋಗ್ರಾಫಿಕ್ʼ ʻವರ್ಷದ ಚಿತ್ರʼ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಫೋಟೋವನ್ನು ಅಮೇರಿಕದ ಅಲಾಸ್ಕಾದಲಿರುವ ಬಿಳಿತಲೆಯ ಹದ್ದುಗಳಿಂದ ಕೂಡಿರುವ ʻಚಿಲ್ಕಟ್ ಬಾಲ್ಡ್ ಈಗಲ್ ಸಂರಕ್ಷಣಾ ವಲಯʼದಲ್ಲಿ ಕ್ಲಿಕ್ಕಿಸಲಾಗಿದೆ.
ಅಲಾಸ್ಕಾದ ಹೈನೆಸ್ ಎಂಬಲ್ಲಿರುವ ʻಚಿಲ್ಕಟ್ ಬಾಲ್ಡ್ ಈಗಲ್ ಸಂರಕ್ಷಣಾ ವಲಯʼಕ್ಕೆ ಚಳಿಗಾಲ ಆರಂಭವಾಗುವುದಕ್ಕೂ ಮುನ್ನ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಹದ್ದುಗಳು ವಲಸೆ ಬರುತ್ತವೆ. ಅಲ್ಲಿನ ನದಿಗಳಲ್ಲಿರುವ ಸಾಲ್ಮನ್ ಮೀನುಗಳನ್ನು ಬೇಟೆಯಾಡಿ ಜೀವಿಸುತ್ತವೆ. ಈ ಸಂದರ್ಭದಲ್ಲಿ ಸುಬ್ರಮಣ್ಯಂ ಕ್ಲಿಕ್ಕಿಸಿದ ಫೋಟೋ ಮನ್ನಣೆಗೆ ಪಾತ್ರವಾಗಿದೆ.
ʻಹದ್ದುಗಳ ಚಟುವಟಿಕೆ ಮತ್ತು ನಡವಳಿಕೆಯನ್ನು ಗಂಟೆಗಟ್ಟಲೆ ಗಮನಿಸಿದ ನನಗೆ ಅವುಗಳ ಅಪೂರ್ವ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಯಿತುʼ ಎಂದು ಕಾರ್ತಿಕ್ ಸುಬ್ರಮಣ್ಯಂ ಹೇಳಿದ್ದಾರೆ.
ವೃತ್ತಿಯಿಂದ ಇಂಜಿನಿಯರ್ ಆಗಿರುವ ಭಾರತೀಯ ಮೂಲದ ಕಾರ್ತಿಕ್ ಸುಬ್ರಮಣ್ಯಂ ಫೋಟೋಗ್ರಫಿಯನ್ನು ತಮ್ಮ ಪ್ರವೃತ್ತಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚೀನ ಗಡಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಸ್ತ್ರ!