Advertisement
ಫೆ. 24 ರ ಟಿ20 ಪಂದ್ಯದ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ರೋಹಿತ್ ಶರ್ಮ, ಇಶಾನ್ ಕಿಶನ್, ಸೂರ್ಯಕುಮಾರ್, ಚಹಲ್, ಮಹಮ್ಮದ್ ಸಿರಾಜ್, ಭುವನೆಶ್ವರ್ ಸೇರಿದಂತೆ ವಿಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಪಾಲ್ಗೊಂಡ ಬಹುತೇಕ ಆಟಗಾರರು “ಈಡನ್ ಗಾರ್ಡರ್ನ್ಸ್’ ಬಯೋಬಬಲ್‌ನಿಂದ ನೇರವಾಗಿ ಲಕ್ನೋಗೆ ಬಂದಿಳಿದಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ.
Related Articles
Advertisement
ದೀಪಕ್ ಚಹರ್ ಔಟ್ರವಿವಾರ ನಡೆದ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದ ದೀಪಕ್ ಚಹರ್ ಚೇತರಿಸಿಕೊಳ್ಳದ ಕಾರಣ ಅವರನ್ನು ಶ್ರೀಲಂಕಾ ಸರಣಿಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಖಚಿತ ಪಡಿಸಿದೆ.
ವಿಂಡೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.