Advertisement
ಜೀವನದ ಲೆಕ್ಕಾಚಾರಉಕ್ರೇನ್ನ ಕರೆನ್ಸಿಯನ್ನು ಹ್ರಿವ್ನಿಯಾ ಎಂದು ಕರೆಯುತ್ತಾರೆ. ಉಕ್ರೇನ್‌ನ ಒಂದು ಹ್ರಿವ್ನಿಯಾ, ನಮ್ಮ ದೇಶದ 2.66 ರೂ.ಗಳಿಗೆ ಸಮ. ಅಮೆರಿಕದ ಒಂದು ಡಾಲರ್ ಭಾರತದ 75.08 ರೂ.ಗಳಿಗೆ ಸಮ. ಹಾಗಾಗಿ, ಅಮೆರಿಕದಲ್ಲಿ ಓದಲು ಮಾಡಬೇಕಾದ ಖರ್ಚಿಗೆ ಹೋಲಿಸಿದರೆ, ಖಾರ್ಕಿವ್‌ನಲ್ಲಿ ಓದುವ ಖರ್ಚು ಶೇ. 67ರಿಂದ 74ರಷ್ಟು ಕಡಿಮೆಯಿದೆ.
ಖಾರ್ಕಿವ್‌ನಲ್ಲಿ, ಸರ್ಕಾರಿ ಹಾಗೂ ಖಾಸಗಿ ಸೇರಿ 20ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸೀಟುಗಳ ಸಂಖ್ಯೆಯೂ ಹೆಚ್ಚಾಗಿವೆ. ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಸಿಗದವರ ಮುಂದಿನ ಆಯ್ಕೆ ಖಾರ್ಕಿವ್. ಅಲ್ಲಿ ವರ್ಷವೊಂದಕ್ಕೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಟ್ಯೂಷನ್ ಶುಲ್ಕ ಸೇರಿ ಅಂದಾಜು 4ರಿಂದ 4.5 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಹಾಗಾಗಿ, ಆರು ವರ್ಷಗಳ ವೈದ್ಯಕೀಯ ಕೋರ್ಸ್ ಮುಗಿಸಲು ಎಲ್ಲಾ ಖರ್ಚು ವೆಚ್ಚಗಳು ಸೇರಿ, 24ರಿಂದ 29 ಲಕ್ಷ ರೂ. ಆಗುತ್ತದೆ. ಖಾರ್ಕಿವ್‌ನಲ್ಲಿ ಇರುವ ಬಹುತೇಕ ವೈದ್ಯ ಕಾಲೇಜುಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂ ಎಚ್‌ಒ) ಪ್ರಮಾಣೀಕೃತಗೊಂಡಿವೆ. ಹಾಗಾಗಿ, ಅಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಬಂದರೆ ಇಡೀ ವಿಶ್ವದಲ್ಲಿ ಎಲ್ಲೇ ಹೋದರೂ ಉದ್ಯೋಗ ಗ್ಯಾರಂಟಿ ಹಾಗೂ ಸಂಬಳವೂ ಹೆಚ್ಚು.
Related Articles
ವೈದ್ಯಕೀಯ ಮಾತ್ರವಲ್ಲದೆ, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಅನೇಕ ವಿದ್ಯಾರ್ಥಿಗಳು ಖಾರ್ಕಿವ್‌ಗೆ ಆಗಮಿಸುತ್ತಾರೆ. ಅವರಿಗೂ ಇಲ್ಲಿ ಖರ್ಚು ವೆಚ್ಚ ಕಡಿಮೆಯೇ ಇದೆ.
ಕೋರ್ಸ್ ವಾರ್ಷಿಕ ಸರಾಸರಿ ಟ್ಯೂಷನ್ ಶುಲ್ಕ (ಲಕ್ಷ ರೂ.ಗಳಲ್ಲಿ)
ಇಂಜಿನಿಯರಿಂಗ್ 1.71
ಕಂಪ್ಯೂಟರ್ ಸೈನ್ಸ್ 1.71
ಸೋಷಿಯಲ್ ಸೈನ್ಸಸ್ 1.85
ವೈದ್ಯಕೀಯ 3.12
ಬ್ಯುಸಿನೆಸ್- ಫೈನಾನ್ಸ್ 1.48
ಸ್ನಾತಕೋತ್ತರ ಪದವಿ 2.22
Advertisement
ತಿಂಗಳ ಖರ್ಚಿಗೆ 30 ಸಾವಿರ ರೂ. ಸಾಕು!ಖಾರ್ಕಿವ್‌ನಲ್ಲಿ ಒಂದೊಂದು ಪ್ರಾಂತ್ಯದಲ್ಲಿ ಜೀವನದ ಖರ್ಚು ಒಂದೊಂದು ರೀತಿಯಲ್ಲಿದೆ. ಒಬ್ಬ ವಿದ್ಯಾರ್ಥಿಗೆ, ಖಾಸಗಿ ವಸತಿ ಬಾಡಿಗೆ, ಆಹಾರ, ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳು, ವಿದ್ಯುತ್ ಹಾಗೂ ನೀರಿನ ಬಿಲ್ ಎಲ್ಲಾ ಸೇರಿ ಸರಾಸರಿ 24ರಿಂದ 30 ಸಾವಿರ ರೂ. ತಗಲುತ್ತದೆ. ಇದರಲ್ಲಿ ವಾರಾಂತ್ಯದಲ್ಲಿ ವಿದ್ಯಾರ್ಥಿಯು ಪಡೆಯುವ ಮನರಂಜನಾ ವೆಚ್ಚವೂ ಸೇರುತ್ತದೆ! ಖಾರ್ಕಿವ್ ಜೀವನದ ಮಾಸಿಕ ಅಂದಾಜು ಖರ್ಚು (ರೂ.ಗಳಲ್ಲಿ)
ಆಹಾರ 10,000
ಬಾಡಿಗೆ 16,000
ವಿದ್ಯುತ್-ಎಲ್‌ಪಿಜಿ 1,200
ನೀರು 1,350
ಪುಸ್ತಕ 147
ಟಿವಿ ಕೇಬಲ್ 380
ಸಾರ್ವಜನಿಕ ಸಾರಿಗೆ 750