ನವದೆಹಲಿ: ಮಾರ್ಚ್ 12 ರಿಂದ 19 ರವರೆಗೆ ಯುಎಇಯಲ್ಲಿ ನಡೆಯಲಿರುವ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಮುಂಬರುವ ತ್ರಿಕೋನ ಟಿ20 ಸರಣಿಗೆ ಭಾರತದ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ.
ತ್ರಿಕೋನ ಸರಣಿಯು ಒಟ್ಟು ಆರು ಲೀಗ್ ಪಂದ್ಯಗಳನ್ನು ಹೊಂದಿರುತ್ತದೆ.
ಪಂದ್ಯಗಳು ಶಾರ್ಜಾದ ಸ್ಕೈಲೈನ್ ಯೂನಿವರ್ಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯಲಿವೆ. ಭಾರತ ತಂಡವು ಮಾರ್ಚ್ 1 ರಿಂದ ಬೆಂಗಳೂರಿನಲ್ಲಿ 10 ದಿನಗಳ ತರಬೇತಿ ಶಿಬಿರವನ್ನು ಸಹ ನಡೆಸಲಿದೆ.
ಭಾರತ ತಂಡ:
ಬಿ1 ವರ್ಗ : ಕಲ್ಪೇಶ್ ನಿಂಬಾಡ್ಕರ್ (ಗುಜರಾತ್), ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಸುಜಿತ್ ಮುಂಡಾ (ಜಾರ್ಖಂಡ್), ಬಸಪ್ಪ ವಡ್ಡಗೋಳ್ (ಕರ್ನಾಟಕ), ಪ್ರೇಮ್ ಕುಮಾರ್ (ಆಂಧ್ರ ಪ್ರದೇಶ), ಪ್ರವೀಣ್ ಕುಮಾರ್ ಶರ್ಮಾ (ಹರಿಯಾಣ)
ಬಿ 2 ವರ್ಗ: ಡಿ ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಎ ಮನೀಶ್ (ಕೇರಳ), ಇರ್ಫಾನ್ ದಿವಾನ್ (ದೆಹಲಿ), ನಕುಲ್ ಬಡನಾಯಕ (ಒಡಿಶಾ), ಲೋಕೇಶ (ಕರ್ನಾಟಕ)
ಬಿ3 ವಿಭಾಗ: ದೀಪಕ್ ಮಲಿಕ್ (ಹರಿಯಾಣ), ಪ್ರಕಾಶ ಜಯರಾಮಯ್ಯ (ಕರ್ನಾಟಕ), ಸುನಿಲ್ ರಮೇಶ್ (ಕರ್ನಾಟಕ), ದುರ್ಗಾ ರಾವ್ (ಆಂಧ್ರ ಪ್ರದೇಶ), ಚಂದನ್ (ಉತ್ತರ ಪ್ರದೇಶ), ರಂಬೀರ್ (ಹರಿಯಾಣ).