ಹೊಸದಿಲ್ಲಿ: ಪ್ರಧಾನಿ ಮೋದಿಯವರು ಇತ್ತೀಚೆಗೆ, ಸ್ವದೇಶಿ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಕರೆಕೊಟ್ಟ ಬೆನ್ನಲ್ಲೇ ಚೀನಾದಲ್ಲಿ ಕಾರ್ಯಾಚರಿಸುತ್ತಿದ್ದ ಭಾರತೀಯ ಮೂಲದ ಕಂಪೆನಿಯೊಂದು ಸ್ವದೇಶಕ್ಕೆ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ವರ್ಗಾಯಿಸಿಕೊಂಡಿದೆ.
ಈ ರೀತಿಯಾಗಿ ಪ್ರಧಾನಿ ಮೋದಿ ಅವರ ‘ಆತ್ಮ ನಿರ್ಭರ ಭಾರತ’ ಕರೆಗೆ ಧ್ವನಿಯಾಗಿದ್ದು ಭಾರತ ಮೂಲದ ಲಾವಾ ಕಂಪೆನಿ.
ಇದೀಗ ಈ ಬಹುರಾಷ್ಟ್ರೀಯ ಕಂಪೆನಿ ತನ್ನೆಲ್ಲ ಉತ್ಪಾದನಾ ಚಟುವಟಿಕೆಯನ್ನು ಚೀನದಿಂದ ಭಾರತಕ್ಕೆ ಸ್ಥಳಾಂತರಿಸಲು ಸಜ್ಜಾಗಿದೆ.
ಭಾರತ ಮೂಲದ ಬಹು ರಾಷ್ಟ್ರೀಯ ಕಂಪೆನಿಯಾದ ಲಾವಾ, ಪ್ರತಿವರ್ಷ ಈ ಕಂಪೆನಿ ಶೇ.33 ಫೋನ್ ಉತ್ಪನ್ನಗಳನ್ನು ಮೆಕ್ಸಿಕೊ, ಆಫ್ರಿಕಾ, ಆಗ್ನೇಯ ಏಶ್ಯಾ ಹಾಗೂ ಪಶ್ಚಿಮ ಏಶ್ಯಾ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ.
ಭಾರತದ ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನಗಳಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ.