Advertisement

ಗೋಲ್ಡ್‌ ಕೋಸ್ಟ್‌: ಭಾರತೀಯ ಶೂಟರ್‌ ತಂದೆಗೆ ಎಚ್ಚರಿಕೆ

07:00 AM Apr 11, 2018 | Team Udayavani |

ಗೋಲ್ಡ್‌ ಕೋಸ್ಟ್‌: ಗೇಮ್ಸ್‌ಗೆ ಸ್ಪರ್ಧಿಗಳ ಜತೆಗೆ ಪೋಷಕರಿಗೆ ತೆರಳಲು ಸರಕಾರ ಅವಕಾಶ ನೀಡಿರಲಿಲ್ಲ. ಈ ಬೆನ್ನಲ್ಲೇ ಮಹಿಳಾ ಶೂಟರ್‌ವೊಬ್ಬರ ತಂದೆ ಗೋಲ್ಡ್‌ ಕೋಸ್ಟ್‌ನಲ್ಲಿ ತನ್ನ ಮಗಳಿದ್ದ ಶೂಟಿಂಗ್‌ ಕೇಂದ್ರದ ಡ್ರೆಸ್ಸಿಂಗ್‌ ಕೊಠಡಿಯೊಳಕ್ಕೆ ನುಗ್ಗಲೆತ್ನಿಸಿ ವಿವಾದಕ್ಕೊಳಗಾಗಿದ್ದಾರೆ. ಈ ಘಟನೆ ಗಂಭೀರ ಸ್ವರೂಪದ್ದಲ್ಲ. ಆಕಸ್ಮಾತ್‌ ಆಗಿದೆ. ಆ ಬಳಿಕ ಬಗೆಹರಿದಿದೆ. ಆಟಗಾರ್ತಿ ಇನ್ನಷ್ಟೆ ಸ್ಪರ್ಧೆ ಮಾಡಬೇಕಿದೆ. ಆಕೆಯ ಹೆಸರನ್ನು ಹೇಳಲು ಆಗುವುದಿಲ್ಲ. ಘಟನೆಯಲ್ಲಿ ಆಕೆಯಿಂದ ಯಾವುದೇ ತಪ್ಪಾಗಿಲ್ಲ. ಸ್ಪರ್ಧಿಯ ತಂದೆಗೆ ಎಚ್ಚರಿಕೆ ನೀಡಿ ಅವರನ್ನು  ಹಿಂದಕ್ಕೆ ಕರೆದುಕೊಂಡಿದ್ದೇವೆ. ಈ ವೇಳೆ ಅವರು ಯಾವುದೇ ಸಮಸ್ಯೆ ಮಾಡಿಲ್ಲ ಎಂದು ಭಾರತೀಯ ರೈಫ‌ಲ್‌ ಸಂಸ್ಥೆ ಅಧ್ಯಕ್ಷ ರಣೀಂದರ್‌ ಸಿಂಗ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next