Advertisement

ಭಾರತದಲ್ಲಿ ಪ್ರಕಟವಾದ ಮೊದಲ ಕೋವಿಡ್ 19 ವೈರಸ್ ಚಿತ್ರ

02:43 AM Mar 28, 2020 | Hari Prasad |

ಭಾರತದಲ್ಲಿ ಪತ್ತೆಯಾದ ಮೊಟ್ಟಮೊದಲ ಕೋವಿಡ್ 19 ವೈರಸ್ ಚಿತ್ರವನ್ನು ಇಂಡಿಯನ್‌ ಜರ್ನಲ್‌ ಆಫ್ ಮೆಡಿಕಲ್‌ ರಿಸರ್ಚ್‌ ಪತ್ರಿಕೆ ಪ್ರಕಟಿಸಿದೆ. ಪುಣೆಯಲ್ಲಿನ ವಿಜ್ಞಾನಿಗಳು ಟ್ರಾನ್ಸ್‌ಮಿಷನ್‌ ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌ ಇಮೇಜಿಂಗ್‌ ಬಳಸಿ ಇದನ್ನು ಸೆರೆಹಿಡಿದಿದ್ದಾರೆ.

Advertisement

ಸಾರ್ಸ್‌- ಕೋವ್‌- 2 ಕುಟುಂಬಕ್ಕೆ ಸೇರಿದ ಈ ವೈರಸ್‌ ಅನ್ನು, 2020ರ ಜನವರಿ 30ರಂದು, ರೋಗಿಯ ಗಂಟಲು ದ್ರವದ ಪರೀಕ್ಷೆ ಮೂಲಕ ಪತ್ತೆಹಚ್ಚಲಾಗಿತ್ತು. ಚೀನಾದ ವುಹಾನ್‌ನಲ್ಲಿ ಮೆಡಿಸಿನ್‌ ಅಭ್ಯಾಸ ಮಾಡುತ್ತಿದ್ದ ಒಬ್ಬಳು ಮಹಿಳೆ, ಮೂವರು ವಿದ್ಯಾರ್ಥಿಗಳು, ಭಾರತಕ್ಕೆ ಮರಳಿ, ಕೋವಿಡ್ 19 ವೈರಸ್ ಕುರಿತ ಸಂಶೋಧನೆಗಿಳಿದಿದ್ದರು. ಆ ಹೊತ್ತಿನಲ್ಲಿ ಅದಾಗಲೇ ವುಹಾನ್‌ನಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮೆರೆದು, ತಿಂಗಳುಗಳೇ ಕಳೆದಿದ್ದವು.

ಕೇರಳದ ಸೋಂಕಿತನಿಂದ ಸಂಗ್ರಹಿಸಲಾದ ಕೋವಿಡ್ 19 ವೈರಸ್ ಚಿತ್ರವು, ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ಗೆ ಕಾರಣವಾದ ಮೆರ್ಸ್‌- ಕೋವ್‌ ವೈರಸ್‌ ಅನ್ನು ಹೋಲುವಂತಿದೆ. 70-80 ಎನ್‌ಎಂ ಗಾತ್ರವನ್ನು ಹೊಂದಿದೆ. ಕೊರೊನಾವು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬಿದಾಗ, ಹೇಗೆಲ್ಲ ಮಾರ್ಪಾಡು ಹೊಂದುತ್ತದೆ ಎಂಬುದನ್ನು ತಿಳಿಯಲು ಈ ಚಿತ್ರ ವಿಜ್ಞಾನಿಗಳಿಗೆ ಸಹಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next