Advertisement

ಅಮೆರಿಕ ಸೇನೆಗೆ ಭಾರತೀಯ ವಿಜ್ಞಾನಿಯ ಸಹಾಯ

12:09 AM May 23, 2019 | Team Udayavani |

ವಾಷಿಂಗ್ಟನ್‌: ಮನಸಿನಿಂದಲೇ ಡ್ರೋನ್‌ ಅಥವಾ ಬಾಂಬ್‌ ನಿಷ್ಕ್ರಿಯ ರೋಬೋಟ್‌ ನಿಯಂತ್ರಿಸುವ ವ್ಯವಸ್ಥೆಯೊಂದನ್ನು ರೂಪಿಸಲು ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಅನುದಾನ ಪಡೆದಿದ್ದಾರೆ. ಈ ಸಾಧನವನ್ನು ಅಮೆರಿಕ ಸೇನೆ ಬಳಸಲಿದ್ದು, ಅಮೆರಿಕ ರಕ್ಷಣಾ ಇಲಾಖೆಯಡಿಯ ಏಜೆನ್ಸಿಯಿಂದ ಗೌರವ್‌ ಶರ್ಮಾ 130 ಕೋಟಿ ರೂ. ಪಡೆದಿದ್ದಾರೆ. ಈ ಸಾಧನ ಅಭಿವೃದ್ಧಿಗೊಂಡರೆ, ಅಮೆರಿಕದ ಯೋಧರು ತಲೆಗೆ ಹೆಲ್ಮೆಟ್‌ನಂಥ ಸಾಧನವನ್ನು ಧರಿಸಿಕೊಂಡು ಡ್ರೋನ್‌ ಹಾಗೂ ಬಾಂಬ್‌ ನಿಷ್ಕ್ರಿಯ ರೋಬೋವನ್ನು ನಿಯಂತ್ರಿಸಬಹುದು. ಇದಕ್ಕೆ ರಿಮೋಟ್‌ ಕಂಟ್ರೋಲ್‌ ಬೇಕಿಲ್ಲ. ಬದಲಿಗೆ ಇದನ್ನು ಧರಿಸಿದ ವ್ಯಕ್ತಿ ಯೋಚನೆ ಮಾಡಿದಂತೆ ಕೆಲಸ ಮಾಡುತ್ತದೆ. ಶರ್ಮಾ ನೇತೃತ್ವದ ಬ್ಯಾಟೆಲೆ ಎಂಬ ಕಂಪೆನಿಯು ನ್ಯಾನೋಸರ್ಜಿಕಲ್‌ ನ್ಯೂರೋ ಟೆಕ್ನಾಲಜಿ ಯನ್ನು ಅಭಿವೃದ್ಧಿ ಪಡಿಸಿದ್ದು, ಬ್ರೇನ್‌ಸ್ಟಾಮಮ್ಸ್‌ ಎಂದು ಹೆಸರಿಸಿದೆ.

Advertisement

ಇಂಜೆಕ್ಷನ್‌ ಮೂಲಕ ದೇಹಕ್ಕೆ ನ್ಯಾನೋಟ್ರಾನ್ಸ್‌ಡ್ನೂಸರ್‌ ಅನ್ನು ಅಳವಡಿಸಲಾಗುತ್ತದೆ. ನಮ್ಮ ನರ ವ್ಯವಸ್ಥೆಗಳು ಮಾಡುವ ಕೆಲಸದ ವಿಧಾನವನ್ನು ಅನುಸರಿಸಿ ಸೂಚನೆಗಳನ್ನು ಇದು ಕಳುಹಿಸುತ್ತದೆ. ಈ ಮೂಲಕ ಒಂದು ನಿರ್ದಿಷ್ಟ ಕೆಲಸವನ್ನು ಈ ಸಾಧನ ಮಾಡುವಂತೆ ಸೂಚನೆ ನೀಡುತ್ತದೆ. ನರಗಳು ಮಿದುಳಿಗೆ ಕಳುಹಿಸುವ ಸಂಕೇತಗಳನ್ನು ಈ ನ್ಯಾನೋಟ್ರಾನ್ಸ್‌ಡ್ನೂಸರ್‌ ಗ್ರಹಿಸಿ ಹೆಡ್‌ಗಿಯರ್‌ಗೆ ರವಾನಿಸುತ್ತದೆ. ಈ ಸಂಕೇತ ಅನಂತರ ಪ್ರಕ್ರಿಯೆಗೊಂಡು ಎಲೆಕ್ಟ್ರಾನಿಕ್‌ ಸಂಕೇತಗಳಾಗಿ ಪರಿವರ್ತನೆ ಯಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next