Advertisement

12 ವರ್ಷಗಳ ನಂತರ ಕೂದಲನ್ನು ಕತ್ತರಿಸಿಕೊಂಡ ಯುವತಿ : ಕೂದಲ ಉದ್ದ ಎಷ್ಟಿದೆ ಗೊತ್ತಾ?

03:28 PM Apr 15, 2021 | Team Udayavani |

ಗುಜರಾತ್ : ನೂರಾರು ವಿಧದ ಸಾಧನೆಗಳಿಗೆ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಗಿಟ್ಟಿಸಿಕೊಂಡಿರುವವರನ್ನು ನಾವು ಈಗಾಗಲೇ ನೋಡಿದ್ದೇವೆ, ಮತ್ತು ಅವರ ಬಗ್ಗೆ ತಿಳಿದಿದ್ದೇವೆ. ಅಂತಹದ್ದೇ ಸಾಧನೆ ಮಾಡಿದ ಭಾರತದ ಯುವತಿಯೊಬ್ಬರು ಇದೀಗ ಗಮನ ಸೆಳೆದಿದ್ದಾರೆ.

Advertisement

ಗುಜರಾತಿನ ಮೊದಸ ಪ್ರದೇಶದ ನೀಲಂಶಿ ಎಂಬುವವರು ವಿಶ್ವದ ಅತ್ಯಂತ ಉದ್ದ ಕೂದಲನ್ನು ಹೊಂದಿದ ಬಾಲಕಿ ಎಂಬ ಶೀರ್ಷಿಕೆಯಲ್ಲಿ ಗಿನ್ನೆಸ್ ದಾಖಲೆ ಬರೆದಿದ್ದರು. ಇವರು 2018ರಲ್ಲಿ ಅಂದ್ರೆ ತಮ್ಮ 16 ನೇ ವಯಸ್ಸಿನಲ್ಲಿ 170.5(5 ಅಡಿ 7 ಇಂಚು) ಸೆಂ.ಮೀ ಕೂದಲನ್ನು ಹೊಂದಿದ್ದು, ಚಿಕ್ಕ ವಯಸ್ಸಿನಲ್ಲೇ ಗಮನ ಸೆಳೆದಿದ್ರು. ಕಳೆದ ಜುಲೈನಲ್ಲಿ ನೀಲಂಶಿ 18 ವರ್ಷಕ್ಕೆ ಕಾಲಿಟ್ಟಿದ್ದು, ಆ ವೇಳೆ ಆಕೆಯ ಕೂದಲ ಉದ್ದ 200 ಸೆಂ,ಮೀ(6.7 ಅಡಿ) ಇದ್ದವು.

ಅರೇ 2018ರಲ್ಲೇ ಸಾಧನೆ ಮಾಡಿದ್ದ ಈಕೆ ಸದ್ಯ ಯಾಕೆ ಗಮನ ಸೆಳೆಯುತ್ತಿದ್ದಾರೆ ಅಂದ್ರಾ. ಅದಕ್ಕೆ ಕಾರಣ ಇದೆ. ನೀಲಂಶಿ ತನ್ನ ಉದ್ದದ ಕೇಶಕ್ಕೆ ಕತ್ತರಿ ಹಾಕಿಸಿದ್ದಾರೆ. ಬರೋಬ್ಬರಿ 12 ವರ್ಷಗಳ ನಂತರ ಕೂದಲನ್ನು ಮೊದಲ ಬಾರಿಗೆ ಕತ್ತರಿಸಿದ್ದಾರೆ.

ನೀಲಂಶಿಯು ತಾವು 6ನೇ ವರ್ಷದವರಿದ್ದಾಗ ಬ್ಯೂಟಿ ಪಾರ್ಲರ್ ಗಳಲ್ಲಿ ಕೂದಲಿನ ವಿಚಾರವಾಗಿ ಆದ ಕೆಟ್ಟ ಅನುಭವದಿಂದ, ಇನ್ನು ಮುಂದೆ ನಾನು ಕೂದಲನ್ನೇ ಕತ್ತರಿಬಾರದು ಎಂಬ ನಿರ್ಧಾರಕ್ಕೆ ಬಂದರಂತೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀಲಂಶಿ ನನಗೆ ನನ್ನ ಕೂದಲಿಂದಲೇ ಹೆಸರು ಸಿಕ್ಕಿದೆ. ಅಲ್ಲದೆ ಸ್ಥಳೀಯವಾಗಿ ನನ್ನನ್ನು ‘ರಿಯಲ್ ಟೈಮ್ ರ್ಯಾಪುಂಜಲ್’ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

Advertisement

ಸದ್ಯ ಕತ್ತರಿಸಿರುವ ಕೂದಲನ್ನು ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾರೆ ನೀಲಂಶಿ. ಈಕೆಯ ಮುಂದೆ ಸದ್ಯ ಮೂರು ಆಯ್ಕೆಗಳಿದ್ದು, ಒಂದು ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡುವುದು, ಮತ್ತೊಂದು ಯಾರಿಗಾದರು ದಾನ ಮಾಡುವುದು ಅಂಥವಾ, ಮ್ಯೂಸಿಯಂಗಳಿಗೆ ನೀಡುವುದು. ಈ ಕುರಿತಾಗಿ ತಮ್ಮ ಅಮ್ಮನೊಂದಿಗೆ ಮಾತನಾಡಿದ್ದೇನೆ ಎಂದು ನೀಲಂಶಿ ತಿಳಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next