Advertisement

ರಾಮ್‌ಕುಮಾರ್‌ಗೆ ಮೊದಲ ಸುತ್ತಿನ ಆಘಾತ

06:00 AM Jul 26, 2018 | Team Udayavani |

ಅಟ್ಲಾಂಟಾ: ಮೊನ್ನೆಯಷ್ಟೇ ಹಾಲ್‌ ಆಫ್ ಫೇಮ್‌ ಟೆನಿಸ್‌ ಪಂದ್ಯಾವಳಿ ಫೈನಲ್‌ಗೆ ಲಗ್ಗೆ ಇರಿಸಿದ ಭಾರತದ ರಾಮ್‌ಕುಮಾರ್‌ ರಾಮನಾಥನ್‌, “ಅಟ್ಲಾಂಟಾ ಓಪನ್‌’ ಎಟಿಪಿ ಟೆನಿಸ್‌ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿ ಹೊರಬಿದ್ದಿದ್ದಾರೆ. ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಜೋಡಿ ಕೂಡ ಎಡವಿದೆ.

Advertisement

ಮೊದಲ ಸುತ್ತಿನಲ್ಲಿ ಅಮೆರಿಕದ ಟಯ್ಲರ್‌ ಫ್ರಿಟ್ಜ್ 6-4, 6-4 ಅಂತರದಿಂದ ರಾಮ್‌ಕುಮಾರ್‌ಗೆ ಸೋಲುಣಿಸಿ ದರು. ಪ್ರಜ್ಞೆಶ್‌ ಗುಣೇಶ್ವರನ್‌ ಕೂಡ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು. ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌-ಜೇಮ್ಸ್‌ ಸೆರಾಟನಿ (ಅಮೆರಿಕ) ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಮೈಕ್‌ ಬ್ರಿಯಾನ್‌-ಫ್ರಾನ್ಸೆಸ್‌ ಟಿಯಾಫೊ ಕೈಯಲ್ಲಿ 5-7, 1-6 ಅಂತರದ ಸೋಲುಂಡರು. 

ಪುರವ್‌ ರಾಜ ಮುನ್ನಡೆ
ಡಬಲ್ಸ್‌ನಲ್ಲಿ ಬ್ರಿಟನ್ನಿನ ಕೆನ್‌ ಸುಪ್‌ಸ್ಕಿ ಜತೆಗೂಡಿ ಆಡುತ್ತಿರುವ ಪುರವ್‌ ರಾಜ 16ರ ಸುತ್ತು ತಲುಪಿದ್ದಾರೆ.  ಅಗ್ರ ಶ್ರೇಯಾಂಕದ ದಿವಿಜ್‌ ಶರಣ್‌-ಅರ್ಟೆಮ್‌ ಸಿಟಾಕ್‌ (ನ್ಯೂಜಿಲ್ಯಾಂಡ್‌) ಜೋಡಿ ಕೂಡ 16ರ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next