Advertisement

Kaalapatthar movie review: ಶಿಲೆಯ ಸುತ್ತದ ಸೆಳೆತವಿದು..

11:22 AM Sep 14, 2024 | Team Udayavani |

ಹೊಸ ಬಗೆಯ ಕಥೆ ಮೂಲಕ ಪ್ರೇಕ್ಷಕರನ್ನು ಸೆಳೆಯಬೇಕೆಂಬ ಹಂಬಲ ಸಿನಿಮಾ ಮಂದಿಯದ್ದು. ಅದರಲ್ಲೂ ಹೊಸ ನಿರ್ದೇಶಕರಲ್ಲಿ ಆ ತುಡಿತ ಹೆಚ್ಚು. ಈ ವಿಷಯದಲ್ಲಿ ನಿರ್ದೇಶಕ ವಿಕ್ಕಿ ಕೂಡಾ ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ಅದು “ಕಾಲಾಪತ್ಥರ್‌’ ಮೂಲಕ. ಈ ವಾರ ತೆರೆಕಂಡಿರುವ ಈ ಸಿನಿಮಾದಲ್ಲಿ ಒಂದಷ್ಟು ಹೊಸ ಬಗೆಯ ವಿಚಾರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವ ಪ್ರಯತ್ನ ಮಾಡಿದ್ದಾರೆ ವಿಕ್ಕಿ.

Advertisement

ಚಿತ್ರದ ಬಗ್ಗೆ ಹೇಳಬೇಕಾದರೆ ಇಲ್ಲೊಬ್ಬ ಯೋಧನಿದ್ದಾನೆ, ಅಣ್ಣಾವ್ರ ಅಭಿಮಾನವಿದೆ, ಕಪ್ಪು ಶಿಲೆಯ ಪುತ್ಥಳಿ ಇದೆ, ಊರ ಮಂದಿಯ ಹೆಮ್ಮೆ ಇದೆ, ಜೊತೆಗೆ ಆತಂಕವೂ ಇದೆ, ಉರಿದುಬೀಳುವ ಎಂಎಲ್‌ಎ ಇದ್ದಾನೆ.. ಈ ಎಲ್ಲಾ ಅಂಶಗಳ ಒಟ್ಟು ಸಮ್ಮಿಲನವೇ ಕಾಲಾಪತ್ಥರ್‌. ಇಲ್ಲಿ ನಾಯಕ ಸೇನಾನಿ. ಎದುರಾಳಿಗಳನ್ನು ಸದೆಬಡಿದು ದೇಶಾದ್ಯಂತ ಖ್ಯಾತಿ ಪಡೆದು ಊರಿಗೆ ಮರಳುವ ಹೆಮ್ಮೆಯ ಮಗ. ಊರ ಜನರ ಪ್ರೀತಿಯ ಪ್ರತೀಕವಾಗಿ ಪುತ್ಥಳಿ. ಅಲ್ಲಿಂದ ಸಮಸ್ಯೆ ಶುರು. ಅದೇನು ಎಂಬುದನ್ನು ತೆರೆಮೇಲೆಯೇ ನೋಡಿ.

ಈ ಸಿನಿಮಾದಲ್ಲಿ ಮನಸ್ಸಿಗೆ ಆಪ್ತವಾಗುವ ಹಲವು ಅಂಶಗಳಿವೆ. ಮುಖ್ಯವಾಗಿ ಡಾ.ರಾಜ್‌ಕುಮಾರ್‌ ಮೇಲಿನ ನಾಯಕ ಅಭಿಮಾನ. ರಾಜ್‌ಕುಮಾರ್‌ ಹಾಡುಗಳನ್ನು ಹಾಡುತ್ತಾ, ಅವರ ಫೋಟೋ ಇಟ್ಟು ಅಭಿಮಾನಿಸುತ್ತಾ, ತನ್ನ ಮನಸ್ಸಿನ ವಿಚಾರಗಳನ್ನು ಅವರಲ್ಲಿ ಹೇಳಿಕೊಳ್ಳುತ್ತಾ ಖುಷಿಯಾಗುವ ಅಂಶಗಳು ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಇಲ್ಲಿ ವೇದನೆ, ತಳಮಳ, ಸಂಕಟ… ನಾಯಕನ ಮನಸ್ಸಿನ ಭಾವನೆಗಳು ವ್ಯಕ್ತವಾಗುವ ಮೂಲಕ ಸಿನಿಮಾದ ಕಲರ್‌ ಕೂಡಾ ಬದಲಾಗುತ್ತಾ ಹೋಗುತ್ತದೆ.

ನಾಯಕನಾಗಿ ನಟಿಸುವ ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸಿರುವ ವಿಕ್ಕಿ ವರುಣ್‌ ಡಬಲ್‌ ಶೇಡ್‌ನ‌ಲ್ಲಿ ಗೆದ್ದಿದ್ದಾರೆ. ಪಾತ್ರಕ್ಕೆ ಹೊಂದಿಕೊಳ್ಳುವ ಜೊತೆಗೆ ಯಾವುದನ್ನು ಎಷ್ಟು ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿದ್ದ ಕಾರಣ ಸಿನಿಮಾದ ಸರಾಗವಾಗಿ ಸಾಗುತ್ತದೆ. ಉಳಿ ದಂತೆ ನಾಯಕಿ ಧನ್ಯಾ, ನಾಗಾಭರಣ, ರಾಜೇಶ್‌ ನಟ ರಂಗ, ಅಚ್ಯುತ್‌ ಕುಮಾರ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.