Advertisement

ರೈತರಿಗಾಗಿ ‘ಕಿಸಾನ್‌ ರೈಲು’ಇಂದು ಮೊದಲ ಸಂಚಾರ

10:37 PM Aug 06, 2020 | Karthik A |

ಮಣಿಪಾಲ: ದೇಶದಲ್ಲಿ ಮೊದಲ ಬಾರಿಗೆ “ಕಿಸಾನ್‌ ರೈಲು’ ಇಂದು ತನ್ನ ಮೊದಲ ಸೇವೆಯನ್ನು ಆರಂಭಿಸಲಿದೆ.

Advertisement

2020ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರೈತರಿಗಾಗಿ ಕಿಸಾನ್‌ ರೈಲುಗಳನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖೀಸಿದ್ದರು.

ಇದನ್ನು ಆಗಸ್ಟ್‌ 7ರಿಂದ ಅಂದರೆ ಇಂದಿನಿಂದ ಭಾರತೀಯ ರೈಲ್ವೇ ಪ್ರಾರಂಭಿಸಲಿದೆ.

ಮೊದಲ ಪ್ರಯಾಣ
ತರಕಾರಿಗಳು ಮತ್ತು ಹಣ್ಣುಗಳನ್ನು ಹೊತ್ತ ಯೋಜನೆಯ ಮೊದಲ ರೈಲು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಇಂದು ಪ್ರಯಾಣಿಸಲಿದೆ. ಆಗಸ್ಟ್‌ 7ರಂದು ಬೆಳಗ್ಗೆ 11 ಗಂಟೆಗೆ ಹೊರಡಲಿದ್ದು, ವಾರಕ್ಕೊಮ್ಮೆ ಓಡಾಡಲಿದೆ. ದೇಶದ ಇತರ ಕಡೆಗಳಲ್ಲಿ ಮುಂಬರುವ ದಿನಗಳಲ್ಲಿ ವಿಸ್ತರನೆಗೊಳ್ಳುವ ಸಾಧ್ಯತೆ ಇದೆ.

ಏನಿದರ ಉದ್ದೇಶ?
ಬೇಗನೇ ನಾಶಗೊಳ್ಳುವ ಅಥವಾ ಪೆರಿಶೆಬಲ್‌ ಕೃಷಿ ಬೆಳೆಗಳನ್ನು ಸಾಗಿಸಲು ಇದನ್ನು ಬಳಸಲಾಗುತ್ತದೆ. ಕಿಸಾನ್‌ ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸುಲಭವಾಗಿ ಸಾಗಿಸುವುದರ ಮೂಲಕ ಬೆಳೆದ ಬೆಳೆಗೆ ನ್ಯಾಯ ಒದಗಬೇಕು ಎಂಬುದು ಇದರ ಆಶಯವಾಗಿದೆ. ಆಯ್ದ ರೈಲುಗಳಲ್ಲಿ ಶೀತ ಘಟಕದ ವ್ಯವಸ್ಥೆ ಕಲ್ಪಿಸಿ, ಅಲ್ಲಿ ರೈತರ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ರವಾನಿಸಲಾಗುತ್ತದೆ.

Advertisement

ಸಂಜೆಯ ವೇಳೆಗೆ ರೈಲು ದಾನಾಪುರ
ಈ ರೈಲು ಮರುದಿನ ಸಂಜೆ 6.45ಕ್ಕೆ ದಾನಾಪುರ ತಲುಪಲಿದೆ. ಅಮದಹಾಗೆ ಇದು ಇತರ ರೈಲಿನಂತೆ ಬೇಗನೇ ತನ್ನ ಗುರಿಯನ್ನು ಮುಟುವುದಿಲ್ಲ. ಹಲವು ನಿಲ್ದಾಣಗಳಲ್ಲಿ ಬೆಳೆಗಳನ್ನು ಇಳಿಸಿ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ಮಹಾರಾಷ್ಟ್ರದ ದೇವಲಾಳಿಯಿಂದ ದಾನಾಪುರ ತಲುಪುವ ರೈಲು 1,519 ಕಿ.ಮೀ. ಸಂಚರಿಸಲು 31.45 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಇದು ತಾಜಾ ತರಕಾರಿ ಬೆಳೆಯುವ ಪ್ರದೇಶ
ಕೇಂದ್ರ ರೈಲ್ವೇಯ ಭೂಸಾವಲ್‌ ವಿಭಾಗವು ಮುಖ್ಯವಾಗಿ ಕೃಷಿ ಆಧಾರಿತ ಪ್ರದೇಶವಾಗಿದೆ. ನಾಸಿಕ್‌ ಮತ್ತು ಸುತ್ತಮುತ್ತಲಿನ ಪ್ರದೇಶ ಅಪಾರ ಪ್ರಮಾಣದ ತಾಜಾ ತರಕಾರಿಗಳು, ಹಣ್ಣುಗಳು, ಹೂವುಗಳು ಸೇರಿದಂತೆ ಕಡಿಮೆ ಬಾಳಿಕೆಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಬೇಗನೇ ಹಾಳಾಗುವ ವಸ್ತುಗಳನ್ನು ಮುಖ್ಯವಾಗಿ ಪಾಟ್ನಾ, ಅಲಹಾಬಾದ್‌, ಕಾಟ್ನಿ, ಸತ್ನಾ ಮತ್ತು ಇತರ ಪ್ರದೇಶಗಳಿಗೆ ಸಾಗಿಸಲಾಗುತ್ತದೆ.

ಎಲೆಲ್ಲಿ ಓಡಾಡಲಿದೆ
ಕಿಸಾನ್‌ ರೈಲು ನಾಸಿಕ್‌ ರಸ್ತೆ, ಮನ್ಮಾದ್‌, ಜಲ್ಗಾಂವ್‌, ಭೂಸಾವಲ…, ಬುರ್ಹಾನ್ಪುರ್‌, ಖಂಡವಾ, ಇಟಾರ್ಸಿ, ಜಬಲ್ಪುರ, ಸತ್ನಾ, ಕಾಟ್ನಿ, ಮಾಣಿಕು³ರ್‌, ಪ್ರಯಾಗ್‌ ರಾಜ್‌ ಚಿಯೋಕಿ, ಪಂ. ದೀನ್‌ದಯಾಲ್‌ ಉಪಾಧ್ಯಾಯ ನಗರ ಮತ್ತು ಬಕ್ಸಾರ್‌.

ಮಮತಾ ಪ್ರಸ್ತಾವಿಸಿದ್ದರು
ಹಾಗೆ ನೋಡಿದರೆ ಇದು ಯುಪಿಎ ಸರಕಾರದ ಅವಧಿಯ ಕನಸು. ಹಾಳಾಗುವ ಕೃಷಿ ಉತ್ಪನ್ನಗಳನ್ನು ಸಾಗಿಸಲು ಶೈತ್ಯೀಕರಿಸಿದ ಪಾರ್ಸೆಲ್‌ ವ್ಯಾನ್‌ಗಳನ್ನು ಬಳಸುವ ಪ್ರಸ್ತಾವವನ್ನು 2009-10ರ ಬಜೆಟ್‌ನಲ್ಲಿ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಘೋಷಿಸಿದರು. ಆದರೆ ಅದು ಕಾರಣಾಂತರಗಳಿಂದ ಈಡೇರಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next