Advertisement

Reduce Speed: ವಂದೇ ಭಾರತ್‌ ಸೇರಿ 4 ರೈಲುಗಳ ವೇಗ ಕಡಿತ: ರೈಲ್ವೇ ಇಲಾಖೆ ನಿರ್ಧಾರ

09:43 AM Jun 27, 2024 | Team Udayavani |

ಹೊಸದಿಲ್ಲಿ: ವಂದೇ ಭಾರತ್‌, ಗತಿಮಾನ್‌ ಎಕ್ಸಪ್ರಸ್‌ ಸೇರಿದಂತೆ ದೇಶದ 4 ಅತೀ ವೇಗದ ರೈಲುಗಳ ವೇಗವನ್ನು ಕಡಿಮೆಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಪ್ರತೀ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಈ ರೈಲುಗಳ ವೇಗ ಈಗ 130ಕ್ಕೆ ಇಳಿಕೆಯಾಗಿದೆ.

Advertisement

ಕಾಂಚನಗಂಗಾ ಎಕ್ಸಪ್ರಸ್‌ ರೈಲು ದುರಂತದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ದಿಲ್ಲಿ-ಝಾನ್ಸಿ ರೈಲು ಮಾರ್ಗದಲ್ಲಿ ರೈಲಿನ ಸುರಕ್ಷತೆ ಹಾಗೂ ಎಚ್ಚರಿಕೆ ನೀಡುವ ವ್ಯವಸ್ಥೆ (ಟಿಪಿಡಬುÉ ಎಸ್‌) ವೈಫ‌ಲ್ಯಗೊಂಡ ಕಾರಣ ಈ ರೈಲುಗಳ ವೇಗ ಕಡಿತಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಸದ್ಯ ದಿಲ್ಲಿ-ಝಾನ್ಸಿ ಗತಿಮಾನ್‌ ಎಕ್ಸ್‌ ಪ್ರಸ್‌, ದಿಲ್ಲಿ-ಖಜುರಾಹೋ ವಂದೇ ಭಾರತ್‌ ಎಕ್ಸಪ್ರಸ್‌, ದಿಲ್ಲಿ-ರಾಣಿ ಕಮಲಾಪತಿ ವಂದೇ ಭಾರತ್‌, ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲುಗಳ ವೇಗ ಕಡಿತವಾಗಿದೆ. ಇಲಾಖೆಯ ಈ ನಿರ್ಧಾರದಿಂದ ರೈಲುಗಳ ಪಯಣದ ಅವಧಿ 25-30 ನಿಮಿಷ ಹೆಚ್ಚಾಗಲಿದ್ದು, ಇದರಿಂದ ಕನಿಷ್ಠ 10 ಸೂಪರ್‌ಫಾಸ್ಟ್‌ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.

ರೈಲ್ವೇ ಇಲಾಖೆಯ ಈ ನಿರ್ಧಾರ ಪರಿಣಾಮಕಾರಿಯಾಗುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಇದನ್ನೂ ಓದಿ: GPS ಆಧರಿತ ಟೋಲ್‌: 10000 ಕೋಟಿ ಲಾಭ…? ಸಚಿವ ನಿತಿನ್‌ ಗಡ್ಕರಿ ಹೇಳಿದ್ದೇನು?

Advertisement
Advertisement

Udayavani is now on Telegram. Click here to join our channel and stay updated with the latest news.

Next