Advertisement
ಗೋವಾದಿಂದ ಪಟ್ನಾಗೆ ತೆರಳುತ್ತಿದ್ದ ವಾಸ್ಕೋಡ ಗಾಮ ಎಕ್ಸ್‌ಪ್ರೆಸ್‌ನ 13 ಬೋಗಿಗಳು ನಿಲ್ದಾಣದಿಂದ ಸ್ವಲ್ಪ ದೂರ ಹೋಗುತ್ತಲೇ ಬೆಳಿಗ್ಗೆ 4.18ರ ಸಮಯದಲ್ಲಿ ಹಳಿ ತಪ್ಪಿವೆ. ಮಣಿಕ್‌ಪುರ ರೈಲು ನಿಲ್ದಾಣದಿಂದ ಆಗಷ್ಟೇ ಹೊರಟಿದ್ದ ಕಾರಣ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗಾಗಿ, ಸಾವು-ನೋವಿನ ಪ್ರಮಾಣ ಕಡಿಮೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪ್ರಮಾಣದ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರಪ್ರದೇಶದ ಸಿಎಂ ಯೋಗಿ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
Related Articles
ಕೇವಲ 12 ಗಂಟೆಗಳ ಅವಧಿಯಲ್ಲಿ 4 ರೈಲು ಅವಘಡಗಳು ಸಂಭವಿಸಿದ್ದು, ಈ ಪೈಕಿ ಮೂರು ಉತ್ತರಪ್ರದೇಶದಲ್ಲೇ ನಡೆದಿರು ವುದು ವಿಶೇಷ. ಗುರುವಾರವಷ್ಟೇ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಕಾರೊಂದಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದರು. ಶುಕ್ರವಾರ ಸಹರಣ್‌ಪುರದಲ್ಲಿ ಜಮ್ಮು-ಪಾಟ್ನಾ ಅರ್ಚನಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಬೋಗಿ ಯಿಂದ ಪ್ರತ್ಯೇಕವಾಗಿ ಹೋದ ಘಟನೆ ನಡೆದಿದ್ದರೆ, ಒಡಿಶಾದಲ್ಲೂ ಸರಕು ರೈಲೊಂದು ಹಳಿ ತಪ್ಪಿದೆ.
Advertisement