ಮುಂಬಯಿ: ವಾಣಿಜ್ಯ ನಗರಿ ಮುಂಬಯಿಗೆ ಬರುವ ದೂರದ ಪ್ರಯಾಣಿಕರಿಗೆ ಕಡಿಮೆ ಖರ್ಚಿನಲ್ಲಿ ವಿಶ್ವದರ್ಜೆಯ ವಾಸ್ತವ್ಯ ಕಲ್ಪಿಸುವ ಪಾಡ್ ಎಂಬ ಪುಟ್ಟ ಕೊಠಡಿ ಅಥವಾ ತಂಗುದಾಣವನ್ನು ರೈಲ್ವೇ ಇಲಾಖೆಯ ಐಆರ್‌ಸಿಟಿಸಿ ಸಂಸ್ಥೆ, ಮುಂಬಯಿನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ನಿರ್ಮಿಸಿದೆ. ದೇಶದಲ್ಲಿ ಇಂಥ ಸೌಲಭ್ಯ ಕಲ್ಪಿಸಿರುವುದು ಇದೇ ಮೊದಲು.
ಇಲ್ಲಿ ಒಟ್ಟು 48 ಪಾಡ್‌ಗಳಿವೆ. ಇವುಗಳಲ್ಲಿ 30 ಪಾಡ್‌ಗಳನ್ನು ಕ್ಲಾಸಿಕ್ ಪಾಡ್‌ಗಳೆಂದೂ, 7 ಮಹಿಳೆಯರಿಗಾಗಿ ಮೀಸಲಿರುವ ಪಾಡ್‌ಗಳೆಂದೂ, 10 ಖಾಸಗಿ ಪಾಡ್‌ಗಳೆಂದೂ ವಿಂಗಡಿಸಲಾಗಿದೆ.
ಕ್ಲಾಸಿಕ್ ಪಾಡ್ಸ್ ಹಾಗೂ ಮಹಿಳಾ ಪಾಡ್‌ಗಳಲ್ಲಿ ಕೇವಲ ಒಬ್ಬರಿಗೆ ಮಾತ್ರ ಸ್ಥಳಾವಕಾಶವಿರುತ್ತದೆ. ಖಾಸಗಿ ಪಾಡ್‌ಗಳಲ್ಲಿಯೂ ಒಬ್ಬರಿಗೆ ಮಾತ್ರವೇ ಅವಕಾಶವಿದೆ.
ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಆದರೆ ಈ ವಿಭಾಗದ ಪಾಡ್‌ಗಲ್ಲಿ ಅಂಗವಿಕಲರು ಅತಿಥಿಗಳಾಗಿ ಆಗಮಿಸಿದಾಗ, ಅವರೊಂದಿಗೆ ಮತ್ತೂಬ್ಬರು ಉಳಿದುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ.