ಕಾಶ್ಮೀರ ಅಥವಾ ಕನ್ಯಾಕುಮಾರಿಯಾಗಿರಲಿ ದೇಶದ ಹೆಚ್ಚಿನ ಜನರು ರೈಲ್ವೆ ಪ್ರಯಾಣವನ್ನೇ ಇಷ್ಟಪಡುತ್ತಾರೆ ಮತ್ತು ಅವಲಂಬಿಸಿದ್ದಾರೆ. ರೈಲ್ವೆಯ ಮಾರ್ಗಸೂಚಿಗಳು ಹೇಳುವಂತೆ ನಿಮ್ಮ ಆಸನ, ಕಂಪಾರ್ಟ್‌ಮೆಂಟ್ ಅಥವಾ ಕೋಚ್‌ನಲ್ಲಿರುವ ಯಾವುದೇ ಪ್ರಯಾಣಿಕರು ಮೊಬೈಲ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವಂತಿಲ್ಲ ಅಥವಾ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಕೇಳುವಂತಿಲ್ಲ.
ಅನೇಕ ಪ್ರಯಾಣಿಕರು ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಾರೆ ಅಥವಾ ತಡರಾತ್ರಿಯವರೆಗೆ ಹಾಡುಗಳನ್ನು ಕೇಳುತ್ತಾರೆ ಎಂದು ಸಹ ಪ್ರಯಾಣಿಕರು ದೂರುವುದು ಸಾಮಾನ್ಯವಾಗಿರುತ್ತದೆ. ಇದಲ್ಲದೇ ಅನೇಕ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರವೂ ಲೈಟ್‌ಗಳನ್ನು ಹಾಕುವುದರಿಂದ ಅವರ ನಿದ್ದೆಗೆ ತೊಂದರೆ ಅನುಭವಿಸಿ ದೂರುವುದು ನಾವು ಕಂಡಿರುತ್ತೇವೆ ಅಥವಾ ನಮಗೆ ಅನುಭವವಾಗಿರುತ್ತವೆ.
ಯಾವುದೇ ಪ್ರಯಾಣಿಕರು ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ರೈಲ್ವೇ ಇಲಾಖೆ ತಿಳಿಸುತ್ತದೆ ಆದರೆ ಇದು ಹಲವರಿಗೆ ತಿಳಿದಿಲ್ಲ ಮತ್ತು ಹೆಚ್ಚಿನವರು ಈ ಕಿರಿಕಿರಿ ನಮಗೇಕೆ ಎಂದು ಸುಮ್ಮನಾಗುತ್ತಾರೆ.
Advertisement
ರೈಲ್ವೇ ನಿಯಮಗಳ ಬಗ್ಗೆ ಕೆಲವು ಮಾಹಿತಿ ಹೀಗಿವೆ:1. ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಮೊಬೈಲ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
2. ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ ಮತ್ತು ಸಂಗೀತ ಕೇಳುವಂತಿಲ್ಲ.
3. ಯಾವುದೇ ಪ್ರಯಾಣಿಕರು ದೂರು ನೀಡಿದರೆ, ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯಾಗಿರುತ್ತದೆ.ಈ ನಿಯಮಗಳ ಪ್ರಕಾರ ಈಗಾಗಲೆ ಹಲವರು ಆಚರಿಸುವ ಹುಟ್ಟುಹಬ್ಬ, ಸಂತೋಷಕ್ಕಾಗಿ ಆಚರಿಸುವ ಪಾರ್ಟಿ ಮುಂತಾದ ಯಾವುದೇ ರೀತಿಯ ಆಚರಣೆಗಳನ್ನು ರೈಲಿನ ಒಳಗೆ ಪ್ರಯಾಣಿಸುವಾಗ ಆಚರಿಸುವಂತಿಲ್ಲ.
ಭಾರತೀಯ ರೈಲ್ವೆ ಹಲವು ಉಚಿತ ಸೇವೆಗಳನ್ನೂ ನೀಡುತ್ತದೆ, ಅವುಗಳ ಬಗ್ಗೆ ತಿಳಿಯೋಣ:
ಟಿಕೆಟ್‌ಗಳ ಬುಕಿಂಗ್ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ ವರ್ಗ ಉನ್ನತೀಕರಣ(Class Upgradation)ದ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ ಸ್ಲೀಪರ್ ಕೋಚ್ ಬುಕ್ ಮಾಡಿದ ಪ್ರಯಾಣಿಕರು 3ನೇ ಎಸಿ ಕ್ಲಾಸ್(AC 3 Tier) ಪಡೆಯಬಹುದು ಮತ್ತು 3ನೇ ಎಸಿ ಕ್ಲಾಸ್ ಪ್ರಯಾಣಿಕರು 2ನೇ ಎಸಿ ಕ್ಲಾಸ್(AC 2 Tier) ಪಡೆಯಬಹುದು.
2ನೇ ಎಸಿ ಕ್ಲಾಸ್ ಪ್ರಯಾಣಿಕರು ಅದೇ ದರದಲ್ಲಿ ಫಸ್ಟ್ ಎಸಿ ಕ್ಲಾಸ್ ಸೌಲಭ್ಯ(First AC Facility)ವನ್ನು ಪಡೆಯಲು ಅನುವು ಮಾಡಿ ಕೊಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಆಟೋ ಅಪ್‌ಗ್ರೇಡ್ ಆಯ್ಕೆ ಕ್ಲಿಕ್ ಮಾಡಬೇಕು. ಇದರ ನಂತರ ರೈಲ್ವೆ ಲಭ್ಯತೆಯ ಆಧಾರದ ಮೇಲೆ ಟಿಕೆಟ್ ನವೀಕರಿಸುತ್ತದೆ.ಅದೇ ರೀತಿ waiting list ಪ್ರಯಾಣಿಕರಿಗೆ ಮತ್ತೊಂದು ರೈಲಿನಲ್ಲಿ ಆಸನ ಲಭ್ಯತೆಯ ಆಧಾರದ ಮೇಲೆ ಪ್ರಯಾಣಿಸಲು ಅವಕಾಶ ನೀಡುತ್ತದೆ.
ದೃಢೀಕೃತ ಟಿಕೆಟ್ ಪಡೆಯಲು ಸಾಧ್ಯವಾಗದ ಪ್ರಯಾಣಿಕರು ಮತ್ತೊಂದು ರೈಲಿನಲ್ಲಿ ಸೀಟು ಪಡೆಯಲು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ‘Option’ ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ರೈಲ್ವೆ ಈ ಸೌಲಭ್ಯವನ್ನು ಒದಗಿಸುತ್ತದೆ.
ಭಾರತೀಯ ರೈಲ್ವೆಯು ಟಿಕೆಟ್‌ಗಳನ್ನು ವರ್ಗಾಯಿಸುವ ಆಯ್ಕೆಯನ್ನು ಸಹ ನೀಡುತ್ತದೆ. ಒಬ್ಬ ವ್ಯಕ್ತಿಯು ಯಾವುದೇ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಅವರು ತನ್ನ ಕುಟುಂಬದ ಯಾವುದೇ ಸದಸ್ಯರ ಹೆಸರಿಗೆ ಟಿಕೆಟ್ ವರ್ಗಾಯಿಸಬಹುದು. ಆದರೆ ಪ್ರಯಾಣ ದಿನದ 24 ಗಂಟೆಗಳ ಮೊದಲು ಟಿಕೆಟ್ ವರ್ಗಾವಣೆ ಮಾಡಿಕೊಳ್ಳಬಹುದು.ಈ ಉಪಯೋಗಗಳನ್ನು ಪಡೆದುಕೊಳ್ಳೋಣ ಮತ್ತು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳೋಣ.