Advertisement

IPL ಕೊನೆಯ ಓವರ್ ನಲ್ಲಿ ಚಿತ್ರಣ ಬದಲು; ರಾಹುಲ್ ಬಳಗ ಸೋಲಿಗೆ ಶರಣು

08:09 PM Apr 22, 2023 | Team Udayavani |

ಲಕ್ನೋ : ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಅದೃಷ್ಟ ಕೈಕೊಟ್ಟ ಕಾರಣ ಕೆ.ಎಲ್ . ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟಾನ್ಸ್ ಎದುರು 7 ರನ್ ಗಳ ಜಯ ಸಾಧಿಸಿದೆ.

Advertisement

ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 6 ವಿಕೆಟ್ ನಷ್ಟಕ್ಕೆ 135 ರನ್ ಗಳನ್ನು ಮಾತ್ರ ಗಳಿಸಿತು. ವೃದ್ಧಿಮಾನ್ ಸಹಾ 47, ನಾಯಕ ಹಾರ್ದಿಕ್ ಪಾಂಡ್ಯ 66 ರನ್ ಗಳಿಸಿದರು. ವಿಜಯ್ ಶಂಕರ್ 10 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 128 ರನ್ ಗಳನ್ನು ಮಾತ್ರ ಗಳಿಸಿ ಸೋಲಿಗೆ ಶರಣಾಗಬೇಕಾಯಿತು. ಕೊನೆಯ ಓವರ್ ಚಿತ್ರಣ ಬದಲಿಸಿತು. ಹಾರ್ದಿಕ್ ಪಾಂಡ್ಯ ಬಳಗ ಅಸಾಧ್ಯವಾದ ಜಯವನ್ನು ಗಳಿಸಿತು. ಕೆಎಲ್ ರಾಹುಲ್ ಅವರ ಇನ್ನಿಂಗ್ಸ್ ಮುನ್ನಡೆಸಿದ ವಿಧಾನ ಗೆಲುವು ಖಾತ್ರಿ ಮಾಡುವಂತಿತ್ತು ಆದರೆ ಅವರ ಉತ್ತಮವಾದ ಪ್ರಾರಂಭ ಸೋಲಿನಲ್ಲಿ ಅಂತ್ಯವಾಗಬೇಕಾಯಿತು. ಇನ್ನಿಂಗ್ಸ್ ಮುಂದುವರೆದಂತೆ ಅವರ ಆಟ ನಿಧಾನವಾಗುತ್ತಾ ಹೋಯಿತು, ಸ್ಟ್ರೈಕ್ ರೇಟ್ ಏರಲಿಲ್ಲ. ರಾಹುಲ್ 68 ರನ್ ಗಳಿಸಿ ಔಟಾದರು. (61 ಎಸೆತ). ಕೈಲ್ ಮೇಯರ್ಸ್ 24, ಕೃನಾಲ್ ಪಾಂಡ್ಯ 23 ರನ್ ಗಳಿಸಿ ಔಟಾದರು.

ರಾಹುಲ್ ಅವರು ಕನಿಷ್ಟ 60 ಎಸೆತಗಳನ್ನು ಎದುರಿಸಿ ನಿಧಾನವಾದ ಸ್ಟ್ರೈಕ್-ರೇಟ್‌ ಹೊಂದಿದ ಆಟಗಾರ ಎಂಬ ಅನಗತ್ಯ ದಾಖಲೆ ತನ್ನದಾಗಿಸಿಕೊಂಡರು. 2009 ಡುಮಿನಿ, 2014 ಆರನ್ ಫಿಂಚ್ ಈ ರೀತಿ ನಿಧಾನವಾದ ಸ್ಟ್ರೈಕ್-ರೇಟ್‌ ಹೊಂದಿದ ಆಟಗಾರರಾಗಿದ್ದಾರೆ.

ಕೊನೆಯ ಓವರ್ ನಲ್ಲಿ 12 ರನ್ ಅಗತ್ಯವಿತ್ತು. ಸುಲಭ ಜಯ ಗಳಿಸುವ ಎಲ್ಲ ಸಾಧ್ಯತೆಗಳಿದ್ದರೂ ಮೋಹಿತ್ ಶರ್ಮಾ ಅವರು ರಾಹುಲ್ ಅವರ ವಿಕೆಟ್ ಪಡೆದರು ಆ ಬಳಿಕ , ಮಾರ್ಕಸ್ ಸ್ಟೊಯಿನಿಸ್ ವಿಕೆಟ್ ಪಡೆದರು. ಆಯುಷ್ ಬಡೋನಿ, ದೀಪಕ್ ಹೂಡಾ ಕೂಡ ಕೊನೆಯ ಓವರ್ ನಲ್ಲಿ ರನ್ ಔಟಾಗಿ ಸೋಲು ಎರಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next