Advertisement

ಎಂಐಟಿ ಎಂಜಿನಿಯರ್‌ಗೆ ಭಾರತೀಯ ಪೇಟೆಂಟ್‌

03:53 PM May 03, 2017 | Team Udayavani |

ಉಡುಪಿ: ಮಣಿಪಾಲ ಎಂಐಟಿ ಮೆಕ್ಯಾನಿಕಲ್‌ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌ ವಿಭಾಗದ ಉಪ ಎಂಜಿನಿಯರ್‌ (ಪ್ರಯೋಗಾಲಯ) ರಘುನಾಥ ಮನೋಹರ್‌ ಅವರ ಸಂಶೋಧನೆಗೆ ಭಾರತೀಯ ಪೇಟೆಂಟ್‌ ಸಿಕ್ಕಿದೆ. ಮೈಕ್ರೋಸ್ಕೋಪ್‌ ಮತ್ತು ಟೆಲಿಸ್ಕೋಪ್‌ನ ಬಹು ಮಸೂರ ರಘುನಾಥರ ಸಂಶೋಧನೆಯಾಗಿದೆ. ಅವರು 2009ರಲ್ಲಿ ಅರ್ಜಿ ಸಲ್ಲಿಸಿದ್ದರು.

Advertisement

ಮಸೂರಗಳ ಸಮೂಹವನ್ನೇ ಕಂಡುಹಿಡಿದಿರುವುದು ರಘುನಾಥರ ಸಾಧನೆಯಾಗಿದೆ. ನಿಮ್ನ ಮಸೂರ ಮತ್ತು ಪೀನ ಮಸೂರಗಳಲ್ಲಿ ಇವರು ಸೂಕ್ಷ್ಮದರ್ಶಕಕ್ಕೆ ಬಳಸುವ ನಿಮ್ನ ಮಸೂರವನ್ನು ಹೊಂದಾಣಿಕೆ ಮಾಡಿಕೊಂಡು ದೂರದರ್ಶಕಕ್ಕೂ ಬಳಸುವಂತೆ ಮಾಡಿದ್ದಾರೆ. 

ಈಗಿನ ಸೂಕ್ಷ್ಮದರ್ಶಕ ಮತ್ತು ದೂರದರ್ಶಕಕ್ಕೆ ಇದು ಬಹಳ ಉಪಯುಕ್ತವಾಗಲಿದೆ ಎನ್ನುತ್ತಾರೆ ರಘುನಾಥ ಮನೋಹರ್‌ ಅವರು. ರಘುನಾಥ ಅವರು ಹಿಂದೆ “ಮಾರ್ಕಿಂಗ್‌ ಗೇಜ್‌’ಗೆ (ಅಳತೆ ಮಾಪಕ) ಅಮೆರಿಕ ಪೇಟೆಂಟ್‌ ಗಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next