Advertisement
60 ಭಾರತೀಯ ಪ್ರಯಾಣಿಕರಿದ್ದ ಗಲ್ಫ್ ಏರ್ ವಿಮಾನ ಮುಂಬೈನಿಂದ ಮ್ಯಾಂಚೆಸ್ಟರ್ಗೆ ಹೊರಟಿತ್ತು ಈ ನಡುವೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ವಿಮಾನವನ್ನು ಕುವೈಟ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ತುರ್ತಾಗಿ ಇಳಿಸಲಾಯಿತು. ಅಲ್ಲದೆ ಈ ವೇಳೆ ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ ಅಲ್ಲದೆ ವಿಮಾನ ತಪಾಸಣೆ ನಡೆಸುವ ಸಮಯ ಸುಮಾರು ಹದಿಮೂರು ಗಂಟೆಗಳ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಅನ್ನ ಆಹಾರವಿಲ್ಲದೆ ಕಾಲ ಕಳೆಯಬೇಕಾಗಿ ಬಂತು ಎಂದು ವಿಮಾನ ಸಂಸ್ಥೆಯ ವಿರುದ್ಧ ಭಾರತೀಯ ಪ್ರಯಾಣಿಕರು ಕಿಡಿಕಾರಿದ್ದಾರೆ.
Related Articles
Advertisement
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕರು ಕುವೈತ್ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಭಾರತೀಯ ಪ್ರಯಾಣಿಕರನ್ನು ಉದ್ದೇಶಪೂರ್ವಕವಾಗಿ ನಿಂದಿಸಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ ಭಾರತೀಯ ಪ್ರಯಾಣಿಕರ ದೂರಿಗೆ ಗಲ್ಫ್ ಏರ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.