ನ್ಯೂಯಾರ್ಕ್: ವಿಮಾನ ಪತನಗೊಂಡು ಭಾರತೀಯ ಮೂಲದ ಮಹಿಳೆ ಮೃತಪಟ್ಟು ಆಕೆಯ ಪುತ್ರಿ ಗಂಭೀರ ಗಾಯಗೊಂಡಿರುವ ಘಟನೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಭಾನುವಾರ ( ಮಾ. 6 ರಂದು) ನಡೆದಿರುವುದು ವರದಿಯಾಗಿದೆ.
ಭಾರತ ಮೂಲದ ರೋಮಾ ಗುಪ್ತಾ (63), ಅವರ ಪುತ್ರಿ ರೀವಾ ಗುಪ್ತಾ (33) ಪ್ರವಾಸಿ ವಿಮಾನದ ಪ್ರದರ್ಶನ ಹಾರಾಟದ ಅನುಭವ ಪಡೆಯಲು ವಿಮಾನ ಹತ್ತಿದ್ದರು. 4 ಆಸನದ ಸಿಂಗಲ್ ಎಂಜಿನ್ ಪೈಪರ್ ಚೆರೋಕೀ ವಿಮಾನದ ಕಾಕ್ಪಿಟ್ ನಲ್ಲಿ ಸಣ್ಣ ಹೊಗೆ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಮಾಡಾಳ್ ಗೆ ಬಿಗ್ ರಿಲೀಫ್; ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ಪರಿಸ್ಥಿತಿಯನ್ನು 23 ವರ್ಷದ ಯುವ ಪೈಲಟ್ ಹತೋಟಿಗೆ ತರಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೆ ಲಾಂಗ್ ಐಲ್ಯಾಂಡ್‌ನಲ್ಲಿರುವ ರಿಪಬ್ಲಿಕ್ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡಿದೆ. ಪರಿಣಾಮ ರೀಮಾ ಗುಪ್ತಾ ಸಾವನ್ನಪ್ಪಿದ್ದು, ಸುಟ್ಟ ಗಾಯಗಳಿಂದ ಅವರ ಮಗಳು ರೀವಾ ಗುಪ್ತಾ ಗಂಭೀರ ಗಾಯಗೊಂಡಿದ್ದಾರೆ. ಪೈಲಟ್ ಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಪಘಾತದ ಕಾರಣವನ್ನು ತಿಳಿಯಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆಯನ್ನು ಕೈಗೊಂಡಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಕೂಡ ಅಪಘಾತದ ಬಗ್ಗೆ ತನಿಖೆ ಕೈಗೊಂಡಿದೆ.