Advertisement

ವೈದ್ಯಕೀಯ ಯಶಸ್ಸು: ಡಿಜಿಟಲ್‌ ತಂತ್ರಜ್ಞಾನದ ಕೂಸುಗಳು

08:30 AM Jul 30, 2017 | Team Udayavani |

ಲಂಡನ್‌: ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿದ್ದ ‘ಡಿಜಿಟಲ್‌ ಗ್ರೋಥ್‌ ಚಾರ್ಟ್‌’ ತಂತ್ರಜ್ಞಾನದ ಮೂಲಕ ಭಾರತೀಯ ಮೂಲದ ಮಾಲಾ ವಸ್ತ್ ಧುರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಈ ತಂತ್ರಜ್ಞಾನದ ಮೂಲಕ ತಪಾಸಣೆಗೊಳಗಾಗಿ ಯಶಸ್ವಿಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಈಕೆ ಗಳಿಸಿದ್ದಾರೆ. ಗರ್ಭದಲ್ಲಿ ಅವಳಿ ಮಕ್ಕಳಿದ್ದರೆ ಅವುಗಳ ಬೆಳವಣಿಗೆ, ಆರೋಗ್ಯ ಸಮಸ್ಯೆ, ತೂಕ, ಹೆರಿಗೆ ದಿನಾಂಕ, ಇತರ ಸೂಕ್ಷ್ಮ ವಿಚಾರಗಳ ಕುರಿತು ಪರೀಕ್ಷೆ ಮಾಡಲೆಂದೇ ಡಿಜಿಟಲ್‌ ಗ್ರೋಥ್‌ ಚಾರ್ಟ್‌ ಅನ್ನು ಲಂಡನ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಮಾಲಾ ವಸ್ತ್ ಧುರಿ (37) ಈ ಸೌಲಭ್ಯ ಬಳಸಿ ಆರೋಗ್ಯಪೂರ್ಣ ಅವಳಿಗಳಿಗೆ ಲಂಡನ್‌ನ ಸೇಂಟ್‌ ಜಾರ್ಜ್‌ ಆಸ್ಪತ್ರೆಯಲ್ಲಿ ಜನ್ಮ ನೀಡಿದರು. 

Advertisement

ಇವರ ಮಕ್ಕಳು ಕಿಯಾನ್‌ ಮತ್ತು ಖುಷ್‌ ಕ್ರಮವಾಗಿ 2 ಕೆ.ಜಿ. ಮತ್ತು 2.1 ಕೆ.ಜಿ. ತೂಕ ಹೊಂದಿದ್ದಾರೆ. ‘ಗ್ರೋಥ್‌ ಚಾರ್ಟ್‌ ಮೂಲಕ ನನ್ನ ಮಕ್ಕಳ ಬೆಳವಣಿಗೆ ತಪಾಸಣೆ ನಡೆಯುತ್ತಿದ್ದ ವೇಳೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನನ್ನ ಮಕ್ಕಳನ್ನು ನೋಡಲು ಉತ್ಸುಕಳಾಗಿದ್ದೆ’ ಎಂದು ಮಾಲ ಹೇಳಿದ್ದಾರೆ. ಬ್ರಿಟನ್‌ನ ಟ್ವಿನ್ಸ್‌ ಆ್ಯಂಡ್‌ ಮಲ್ಟಿಪಲ್‌ ಬರ್ತ್‌ ಅಸೋಸಿಯೇಶನ್‌ ದೇಣಿಗೆ ಸಂಗ್ರಹಿಸಿ ಈ ಚಾರ್ಟ್‌ ಅನ್ನು ಅಭಿವೃದ್ದಿ ಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next