Advertisement

ಮೆಲ್ಬೋರ್ನ್: ಭಾರತೀಯ ಪಾದ್ರಿಗೆ ಇರಿತ; ಸೇವೆಗೆ ಅನರ್ಹ ಎಂದ ಹಲ್ಲೆಕೋರ

11:09 AM Mar 20, 2017 | udayavani editorial |

ಮೆಲ್ಬೋರ್ನ್ : ಇಲ್ಲಿನ ಚರ್ಚ್‌ ಒಂದರಲ್ಲಿ  ಭಾರತೀಯ ಮೂಲದ ಕ್ಯಾಥೋಲಿಕ್‌ ಪಾದ್ರಿಯೊಬ್ಬರನ್ನು ಜನಾಂಗೀಯ ದ್ವೇಷದಲ್ಲಿ  ಚರ್ಚ್‌ನಲ್ಲೇ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.

Advertisement

ಜನಾಂಗೀಯ ಹಲ್ಲೆಗೆ ಗುರಿಯಾದವರೆಂದರೆ 48ರ ಹರೆಯದ ಟಾಮಿ ಕಳತ್ತೂರ್‌ ಮ್ಯಾಥ್ಯೂ. ಫಾಕ್‌ನರ್‌ನಲ್ಲಿ ನಿನ್ನೆ ಸೈಂಟ್‌ ಮ್ಯಾಥ್ಯೂ ಪ್ಯಾರಿಷ್‌ನಲ್ಲಿ ಇಟಾಲಿಯನ್‌ ಭಾಷೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ 72ರ ಹರೆಯದ ಫಾಕ್‌ನರ್‌ ನಿವಾಸಿಯೊಬ್ಬ ಟಾಮಿ ಮ್ಯಾಥ್ಯೂಸ್‌ ಅವರಿಗೆ “ನೀನು ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅನರ್ಹ; ಭಾರತೀಯನಾಗಿರುವ ನೀನು ಒಂದೋ ಹಿಂದೂ ಅಥವಾ ಮುಸ್ಲಿಮನಾಗಿರಬೇಕು’ ಎಂದು ಕೋಪೋದ್ರಿಕ್ತನಾಗಿ ಚೂರಿಯಿಂದ ಟಾಮಿ ಅವರ ಕುತ್ತಿಗೆಗೆ ಇರಿದು ಗಾಯಗೊಳಿಸಿದ. 

ಘಟನೆಯ ಬಳಿಕ ಪೊಲೀಸರು ಹಲ್ಲೆಕೋರ ಫಾಕ್‌ನರ್‌ ವ್ಯಕ್ತಿಯನ್ನು ಬಂಧಿಸಿ ಆತನ ವಿರುದ್ಧ ಉದ್ದೇಶಪೂರ್ವಕ ಮತ್ತು ನಿರ್ಲಕ್ಷ್ಯದಿಂದ ಇರಿದು ಗಾಯಗೊಳಿಸಿದ ಕೇಸು ಹಾಕಿದರು. ಜೂನ್‌ 13ರಂದು ಬ್ರಾಡ್‌ ಮೆಡೋಸ್‌ ಮ್ಯಾಜಿಸ್ಟ್ರೇಟರ ಮುಂದೆ ಹಾಜರಾಗಬೇಕೆಂಬ ಆದೇಶದೊಂದಿಗೆ ಆರೋಪಿ ಫಾಕ್‌ನರ್‌ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಕ್ಯಾಥೋಲಿಕ್‌ ಆರ್ಕ್‌ಡಯೋಸಿಸ್‌ನ ಮೆಲ್ಬೋರ್ನ್ ವಕ್ತಾರ ಶೇನ್‌ ಹೀಲಿ ಅವರು “ಈ ಘಟನೆಯು ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಇರಿತಕ್ಕೆ ಗುರಿಯಾಗಿ ಕುತ್ತಿಗೆಗೆ ಗಂಭೀರ ಗಾಯಗೊಂಡು “ದಿ ನಾರ್ದರ್ನ್ ಆಸ್ಪತ್ರೆಗೆ ಸೇರಿರುವ ಫಾದರ್‌ ಟಾಮಿ ಮ್ಯಾಥ್ಯೂಸ್‌  ಅವರ ದೇಹ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. 

Advertisement

ವಿಕಾರ್‌ ಜನರಲ್‌ ಮಾನ್ಸಿಂಗರ್‌ ಗ್ರೆಗ್‌ ಬೆನೆಟ್‌ ಅವರು ಘಟನೆಯನ್ನು ಖಂಡಿಸಿದ್ದಾರೆ. “ಟಾಮಿ ಮ್ಯಾಥ್ಯೂಸ್‌ ಅವರು ಬೇಗನೆ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲು ಬಯಸಿದ್ದಾರೆ’ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next