Advertisement

ಭಾರತ ಸಂಜಾತ ಗಣಿತಜ್ಞ ಅಕ್ಷಯ್‌ ವೆಂಕಟೇಶ್‌ಗೆ Fields medal ಪ್ರಶಸ್ತಿ

11:54 AM Aug 02, 2018 | Team Udayavani |

ನ್ಯೂಯಾರ್ಕ್‌ : ಪ್ರಖ್ಯಾತ ಭಾರತೀಯ-ಆಸ್ಟ್ರೇಲಿಯನ್‌ ಗಣಿತಜ್ಞ ಅಕ್ಷಯ್‌ ವೆಂಕಟೇಶ್‌  ಅವರು ಗಣಿತದಲ್ಲಿನ ನೊಬೆಲ್‌ ಪ್ರಶಸ್ತಿ ಎಂದೇ ಪ್ರಸಿದ್ಧವಾಗಿರುವ, ಪ್ರತಿಷ್ಠಿತ Fields medal ಗೆದ್ದ ನಾಲ್ವರಲ್ಲಿ ಓರ್ವರಾಗಿದ್ದಾರೆ. 

Advertisement

40ರ ಕೆಳ ಹರೆಯದ ಅತ್ಯಂತ ಭರವಸೆಯ, ಮಹಾ ಪ್ರತಿಭಾವಂತ ಗಣಿತಜ್ಞರನ್ನು ಗುರುತಿಸಿ ನೀಡಲಾಗುವ Fields medal ನಾಲ್ಕು ವರ್ಷಗಳಿಗೊಮ್ಮೆ ಪ್ರದಾನಿಸಲಾಗುವ ಪ್ರತಿಷ್ಠಿತ ಪುರಸ್ಕಾರವಾಗಿದೆ. 

36ರ ಹರೆಯದ ದಿಲ್ಲಿ ಸಂಜಾತ ವೆಂಕಟೇಶ್‌ ಅವರು ಪ್ರಕೃತ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣಿತ ಬೋಧಕರಾಗಿದ್ದಾರೆ. ಇವರು ಗಣಿತದಲ್ಲಿ ಅತ್ಯಪರೂಪದ, ವಿಸ್ತೃತ ವಿಷಯಗಳಿಗೆ ಸಂಬಂಧಿಸಿ ಭಾರೀ ಕೊಡುಗೆಗಳನ್ನು ನೀಡಿರುವ ಕಾರಣಕ್ಕೆ ಇವರಿಗೆ Fields medal ಪ್ರಾಪ್ತವಾಗಿದೆ.

ವೆಂಕಟೇಶ್‌ ಅವರೊಂದಿಗೆ ಈ ಪ್ರತಿಷ್ಠಿತ ಪುರಸ್ಕಾರ ಪೆಡೆದಿರುವ ಇತರ ಮೂವರೆಂದರೆ ಕೌಚರ್‌ ಬರ್ಕರ್‌ (ಇರಾನ್‌ ಕುರ್ಡಿಶ್‌ ಮೂಲದ, ಕ್ಯಾಂಬ್ರಿಜ್‌ ವಿವಿ ಪ್ರೊಫೆಸರ್‌), ಜರ್ಮನಿಯ ಪೀಟರ್‌ ಶೋಲ್‌ಜ್‌ (ಬಾನ್‌ ವಿವಿ ಬೋಧಕ), ಮತ್ತು ಅಲೆಸ್ಸಿಯೋ ಫಿಗಾಲಿ (ಇಟಿಝಡ್‌ ಜ್ಯುರಿಕ್‌ನಲ್ಲಿನ ಇಟಾಲಿಯನ್‌ ಗಣಿತಜ್ಞ).

Advertisement

Udayavani is now on Telegram. Click here to join our channel and stay updated with the latest news.

Next