ಮೇರಿಲ್ಯಾಂಡ್ : ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ಭಾರತೀಯ ಮೂಲದ 25 ವರ್ಷದ ಯುವಕನೊಬ್ಬ ಸ್ಪೋರ್ಟ್ಸ್ ಯುಟಿಲಿಟಿ ವಾಹನದಲ್ಲಿ ತಲೆಗೆ ಗುಂಡೇಟು ತಗುಲಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಯಿ ಚರಣ್ ನಕ್ಕಾ (25) ಎಂದು ಗುರುತಿಸಲಾದ ವ್ಯಕ್ತಿ ಸಿಲ್ವರ್ ಹ್ಯುಂಡೈ ಟಕ್ಸನ್ ಎಸ್ಯುವಿಯೊಳಗೆ ಗುಂಡೇಟಿನಿಂದ ಗಾಯಗೊಂಡಿರುವುದು ಕಂಡುಬಂದಿದೆ ಎಂದು ಸುದ್ದಿ ಸಂಸ್ಥೆಗಳು ಸೋಮವಾರ ವರದಿ ಮಾಡಿದೆ.
ಅಮೆರಿಕಾ ಕಾಲಮಾನ ಸೋಮವಾರ ಮುಂಜಾನೆ 4. 30 ರ ಸುಮಾರಿಗೆ, ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರದ ಪೊಲೀಸರನ್ನು ಕರೆಸಿ, ಗಂಭೀರವಾಗಿ ಗಾಯಗೊಂಡಿದ್ದ ನಕ್ಕಾ ಅವರನ್ನು ತಕ್ಷಣವೇ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಆರ್. ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್ಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ನಕ್ಕಾ ಸಾವಿನ ನಂತರ ಬಾಲ್ಟಿಮೋರ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆಯ ಕುರಿತು ಹೆಚ್ಚಿನ ವಿವರಗಳು ತಕ್ಷಣವೇ ಸ್ಪಷ್ಟವಾಗಿಲ್ಲ.
ಅಮೇರಿಕನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ ಪ್ರಕಾರ,ದೇಶದಲ್ಲಿ ಪ್ರತೀ ವರ್ಷ ಬಂದೂಕು ದಾಳಿಗಳು 38,000 ಕ್ಕಿಂತ ಹೆಚ್ಚು ಜನರ ಹತ್ಯೆಗೆ ಕಾರಣವಾಗುತ್ತದೆ ಮತ್ತು ಪ್ರತಿ ವರ್ಷ ಸುಮಾರು 85,000 ಗಾಯಾಳುಗಳನ್ನಾಗಿ ಮಾಡುತ್ತದೆ.