Advertisement

Indian-Origin Israeli Soldier: ಗಾಜಾ ಸಂಘರ್ಷ… ಭಾರತ ಮೂಲದ ಇಸ್ರೇಲ್ ಯೋಧ ಮೃತ್ಯು

08:25 AM Nov 03, 2023 | Team Udayavani |

ಟೆಲ್ ಅವೀವ್: ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕರ ವಿರುದ್ಧ ನಡುವೆ ನಡೆದ ಸಂಘರ್ಷದಲ್ಲಿ ಭಾರತೀಯ ಮೂಲದ ಇಸ್ರೇಲ್ ಸೈನಿಕ ಸೇರಿ ಒಟ್ಟು 17 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಗುರುವಾರ ತಿಳಿಸಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿದ ಮೇಯರ್ ಬೆನ್ನಿ ಬಿಟ್ಟನ್ ಗಾಜಾದಲ್ಲಿ ಅವಿತಿರುವ ಹಮಾಸ್ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಡೆದ ಸಂಘರ್ಷದಲ್ಲಿ ಸುಮಾರು ಹದಿನೇಳು ಮಂದಿ ಇಸ್ರೇಲ್ ಯೋಧರು ಮೃತಪಟ್ಟಿದ್ದಾರೆ ಅದರಲ್ಲಿ ಭಾರತೀಯ ಮೂಲದ ಯೋಧನಾದ ಸಾರ್ಜೆಂಟ್. ಹಾಲೆಲ್ ಸೊಲೊಮನ್ ಕೂಡ ಸೇರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಾಕಿದ್ದಾರೆ.

ಹಾಲೆಲ್ ಅವರ ನಿಧನಕ್ಕೆ ಮೇಯರ್ ಬೆನ್ನಿ ಬಿಟ್ಟನ್ ಸಂತಾಪ ಸೂಚಿಸಿದ್ದು, ಯೋಧನ ಸಾವಿನ ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ “ಗಾಜಾದಲ್ಲಿ ನಡೆದ ಯುದ್ಧದಲ್ಲಿ ಡಿಮೋನಾ ಅವರ ಮಗ ಹಾಲೆಲ್ ಸೊಲೊಮನ್ ಅವರು ಮೃತಪಟ್ಟಿದ್ದು ಈ ವಿಚಾರವನ್ನು ಹೇಳಲು ದುಃಖವಾಗುತ್ತಿದೆ ಎಂದು ಬಿಟ್ಟನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿ ಸಾವಿರಾರು ಮಂದಿಯನ್ನು ಹತ್ಯೆಗೈದು ಸುಮಾರು 200 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಭಯೋತ್ಪಾದಕರ ಅಡಗುತಾಣವಾದ ಗಾಜಾ ಪಟ್ಟಿಯ ಮೇಲೆ ತನ್ನ ವೈಮಾನಿಕ ದಾಳಿಯನ್ನು ಮುಂದುವರೆಸಿತ್ತು, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 11,000 ಮಂದಿ ಮೃತಪಟ್ಟಿದ್ದು ಇಸ್ರೇಲ್ ದಾಳಿಯನ್ನು ಮುಂದುವರೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next