Advertisement

ಮಹಿಳೆಯ ಕಣ್ಣಲ್ಲಿತ್ತು 27 ಕಾಂಟ್ಯಾಕ್ಟ್ ಲೆನ್ಸ್‌ಗಳು!

03:10 AM Jul 17, 2017 | Team Udayavani |

ಲಂಡನ್‌: ಭಾರತೀಯ ಮೂಲದ ನೇತ್ರ ತಜ್ಞರೊಬ್ಬರನ್ನು ನಿಬ್ಬೆರಗಾಗಿಸಿದ ಘಟನೆಯಿದು. ಬರ್ಮಿಂಗ್‌ಹ್ಯಾಂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೇತ್ರ ತಜ್ಞೆ ರೂಪಲ್‌ ಮೊರ್ಜರಿಯಾ ಅವರು 67 ವರ್ಷದ ಮಹಿಳೆಯ ಕಣ್ಣಿನಲ್ಲಿ 27 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಪತ್ತೆಹಚ್ಚಿದ್ದಾರೆ. ಕಣ್ಣು ಉರಿಯುತ್ತಿದೆ ಎಂದು ಹೇಳಿ ತಪಾಸಣೆಗೆ ಬಂದ ಮಹಿಳೆಯ ಕಣ್ಣಿನಲ್ಲಿ ಮೊದಲಿಗೆ 17 ಲೆನ್ಸ್‌ಗಳು ಕಾಣಿಸಿವೆ. ನಂತರ ಆಕೆಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಮತ್ತೆ 10 ಲೆನ್ಸ್‌ಗಳು ಇರುವುದು ಪತ್ತೆಯಾಗಿದೆ. ಇದು ವೈದ್ಯಲೋಕದ ಅಚ್ಚರಿಯಾಗಿದ್ದು, ಇದುವರೆಗಿನ ಅನುಭವದಲ್ಲಿ ಎಂದೂ ಇಂಥದ್ದನ್ನು ಕಂಡಿಲ್ಲ ಎಂದು ರೂಪಲ್‌ ಹೇಳಿದ್ದಾರೆ. ಆ ಮಹಿಳೆಯು 35 ವರ್ಷಗಳಿಂದಲೂ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದಳಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next