Advertisement

ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಹತ್ಯೆ : ಅನಾಥವಾಗಿ ಅಳುತ್ತಿದ್ದ ನಾಲ್ಕು ವರ್ಷದ ಮಗು

10:01 PM Apr 09, 2021 | Team Udayavani |

ನ್ಯೂಯಾರ್ಕ್‌: ಅಮೆರಿಕದ ನ್ಯೂಜೆರ್ಸಿಯ ತಮ್ಮ ಮನೆಯಲ್ಲಿ ಭಾರತೀಯ ಮೂಲದ ಟೆಕ್ಕಿ ಮತ್ತು ಆತನ ಗರ್ಭಿಣಿ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಬಾಲ್ಕನಿಯಲ್ಲಿ ಅನಾಥಳಾಗಿ ನಿಂತು ಅಳುತ್ತಿದ್ದ 4 ವರ್ಷದ ಮಗಳಿಂದ ಇವರ ಸಾವಿನ ವಿಚಾರ ಅಕ್ಕ ಪಕ್ಕದ ಮನೆಯವರಿಗೆ ತಿಳಿದುಬಂದಿದೆ.

ಬಾಲಾಜಿ ಭರತ್‌ ರುದ್ರಾವರ್‌ (32), ಆರತಿ (32) ಮೃತ ದುರ್ದೈವಿ ದಂಪತಿ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ನಂತರ ಮನೆಯೊಳಗೆ ಪ್ರವೇಶಿಸಿ, ಪುಟಾಣಿಯನ್ನು ರಕ್ಷಿಸಿದ್ದಾರೆ. ಸಾವಿಗೆ ನಿಶ್ಚಿತ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ :ಮಹಾರಾಷ್ಟ್ರದಲ್ಲಿಂದು ಕೋವಿಡ್ ಸ್ಫೋಟ : ಒಂದೇ ದಿನ ಬರೋಬ್ಬರಿ 58,993 ಮಂದಿಗೆ ಕೋವಿಡ್

ಬಾಲಾಜಿ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮೂಲದವರಾಗಿದ್ದು, ಇವರ ತಂದೆ ಮುಂಬೈನಲ್ಲಿ ಉದ್ಯಮಿ. “ನನ್ನ ಮಗ- ಸೊಸೆ ತುಂಬಾ ಅನ್ಯೋನ್ಯವಾಗಿದ್ದರು. ಸೊಸೆ 7 ತಿಂಗಳ ಗರ್ಭಿಣಿ. ನೆರೆಹೊರೆಯವರ ಜೊತೆಗೂ ಚೆನ್ನಾಗಿದ್ದರು. ಸಾವಿನ ಬಗ್ಗೆ ಅಮೆರಿಕ ಪೊಲೀಸ್‌ ತನಿಖೆ ನಡೆಸುವ ಭರವಸೆ ನೀಡಿದೆ’ ಎಂದು ತಂದೆ ತಿಳಿಸಿದ್ದಾರೆ. ಇವರ ಮೃತದೇಹ ಭಾರತ ತಲುಪಲು ಇನ್ನೂ 8-10 ದಿನಗಳು ಬೇಕಾಗುತ್ತವೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next