Advertisement

ನ್ಯೂಜಿಲ್ಯಾಂಡ್‌ ಟೆಸ್ಟ್‌  ತಂಡದಲ್ಲಿ ಭಾರತೀಯ ಮೂಲದ ಬೌಲರ್‌

06:00 AM Jul 26, 2018 | |

ವೆಲ್ಲಿಂಗ್ಟನ್‌: ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ ಕ್ರಿಕೆಟ್‌ ಸರಣಿ ಆಡಲಿರುವ ನ್ಯೂಜಿಲ್ಯಾಂಡ್‌, ತನ್ನ ಮೂರೂ ತಂಡಗಳನ್ನು ಅಂತಿಮಗೊಳಿಸಿದೆ. ಈ ಬಾರಿ “ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾದ ಎಡಗೈ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಮೊದಲ ಸಲ ರಾಷ್ಟ್ರೀಯ ತಂಡದಿಂದ ಕರೆ ಪಡೆದಿದ್ದಾರೆ. ಪಟೇಲ್‌ ಭಾರತೀಯ ಮೂಲದ ಕ್ರಿಕೆಟಿಗನೆಂಬುದು ವಿಶೇಷ.

Advertisement

29ರ ಹರೆಯದ ಅಜಾಜ್‌ ಯೂನುಸ್‌ ಪಟೇಲ್‌ ಮೂಲತಃ ಮುಂಬಯಿ ಯವರಾಗಿದ್ದು, ಈಗ ಆಕ್ಲೆಂಡ್‌ನ‌ಲ್ಲಿ ನೆಲೆಸಿದ್ದಾರೆ. ಆಕ್ಲೆಂಡ್‌, ಆಕ್ಲೆಂಡ್‌ ಎ, ಸೆಂಟ್ರಲ್‌ ಡಿಸ್ಟ್ರಿಕ್ಟ್, ಸೆಂಟ್ರಲ್‌ ಡಿಸ್ಟ್ರಿಕ್ಟ್ ಎ ತಂಡಗಳನ್ನು ಪ್ರತಿನಿಧಿಸಿದ್ದಾರೆ. 44 ಪ್ರಥಮ ದರ್ಜೆ ಪಂದ್ಯಗಳಿಂದ 187 ವಿಕೆಟ್‌, 21 ಲಿಸ್ಟ್‌ ಎ ಪಂದ್ಯಗಳಿಂದ 22 ವಿಕೆಟ್‌ ಹಾಗೂ 23 ಟಿ20 ಪಂದ್ಯಗಳಿಂದ 24 ವಿಕೆಟ್‌ ಉರುಳಿಸಿದ್ದಾರೆ. 

“ಕಳೆದೆರಡು ವರ್ಷಗಳಿಂದ ಅಜಾಜ್‌ ದೇಶಿ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ನಿರ್ವಹಣೆ ತೋರುತ್ತ ಬಂದಿದ್ದಾರೆ. ಅಲ್ಲದೇ ಮಿಚೆಲ್‌ ಸ್ಯಾಂಟ್ನರ್‌ ಪೂರ್ತಿ ಚೇತರಿಕೆ ಕಂಡಿಲ್ಲ. ಅಜಾಜ್‌ ಸೇರ್ಪಡೆಯಿಂದ ತಂಡದ ಸ್ಪಿನ್‌ ವಿಭಾಗದಲ್ಲಿ ವೈವಿಧ್ಯವನ್ನು ಕಾಣಬಹುದು’ ಎಂಬುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ಗೆವಿನ್‌ ಲಾರ್ಸೆನ್‌ ಹೇಳಿದ್ದಾರೆ. 

ಭಾರತೀಯ ಮೂಲದವರು…
ನ್ಯೂಜಿಲ್ಯಾಂಡ್‌ ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ಮಂದಿ ಭಾರತೀಯ ಮೂಲದ ಆಟಗಾರರು ಆಡಿದ್ದಾರೆ. ಇವರಲ್ಲಿ ದೀಪಕ್‌ ಪಟೇಲ್‌, ಜೀತನ್‌ ಪಟೇಲ್‌, ಐಶ್‌ ಸೋಧಿ, ರೋನಿ ಹಿರಾ, ತರುಣ್‌ ನೆಥುಲ, ಜೀತ್‌ ರಾವಲ್‌ ಪ್ರಮುಖರು. ಪಂಜಾಬಿನ ಐಶ್‌ ಸೋಧಿ ಈಗಿನ ಟೆಸ್ಟ್‌ ತಂಡದಲ್ಲೂ ಸ್ಥಾನ ಸಂಪಾದಿಸಿದ್ದಾರೆ. ಅಜಾಜ್‌ ಪಟೇಲ್‌ ನೂತನ ಸೇರ್ಪಡೆ.

ನ್ಯೂಜಿಲ್ಯಾಂಡ್‌-ಪಾಕಿಸ್ಥಾನ ನಡುವೆ 3 ಟೆಸ್ಟ್‌, 5 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next