Advertisement

ಇಂಡಿಯನ್‌ ಓಪನ್‌ ಸೈನಾ ನೆಹ್ವಾಲ್‌ ಗೈರು

12:30 AM Mar 21, 2019 | |

ಹೊಸದಿಲ್ಲಿ: ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಮಾ. 26ರಿಂದ ಆರಂಭವಾಗಲಿರುವ “ಇಂಡಿಯನ್‌ ಓಪನ್‌’ ಕೂಟದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

Advertisement

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಜಠರ ಸಂಬಂಧಿ ಸಮಸ್ಯೆಯಿದ್ದರೂ ಕೂಟದಲ್ಲಿ ಆಡಿದ ಸೈನಾ ಅನಂತರ ನಡೆದ ಸ್ವಿಸ್‌ ಓಪನ್‌ ಕೂಟದ ವೇಳೆ ಸಮಸ್ಯೆ ತೀವ್ರಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೂ ಚೇತರಿಸದ ಕಾರಣ “ಇಂಡಿಯನ್‌ ಓಪನ್‌’ ಕೂಟದಲ್ಲೂ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಇದನ್ನು ಸೈನಾ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ಗೆ ತಿಳಿಸಿದ್ದಾರೆ. ಸೈನಾ ಅನುಪಸ್ಥಿತಿಯಲ್ಲಿ ವನಿತಾ ಸಿಂಗಲ್ಸ್‌ ಸ್ಪರ್ಧೆಯಲ್ಲಿರುವ ಭಾರತೀಯ ಆಟಗಾರ್ತಿ ಪಿ.ವಿ. ಸಿಂಧು ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next