Advertisement

ಇಂಡಿಯಾ ಓಪನ್‌: ಫೈನಲ್‌ನಲ್ಲಿ ಎಡವಿದ ಶ್ರೀಕಾಂತ್‌

11:22 PM Mar 31, 2019 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌’ ಕೂಟದಲ್ಲಿ ಪ್ರಶಸ್ತಿ ಬರಗಾಲವನ್ನು ಕೊನೆಗೊಳಿಸುವ ನಿರೀಕ್ಷೆಯಲ್ಲಿದ್ದ ಮಾಜಿ ಚಾಂಪಿಯನ್‌ ಕೆ. ಶ್ರೀಕಾಂತ್‌ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.

Advertisement

ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಶ್ರೀಕಾಂತ್‌ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಕೇವಲ 46 ನಿಮಿಷಗಳ ಆಟದಲ್ಲಿ 7-21, 20-22 ಗೇಮ್‌ಗಳಿಂದ ಸೋತರು.

ಆರಂಭದಲ್ಲೇ ತೀವ್ರ ಪೈಪೋಟಿ
ಆರಂಭದಿಂದಲೇ ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಮೊದಲ ಗೇಮ್‌ನಲ್ಲಿ 4-4ರ ಬಳಿಕ 7-7 ಸಮಬಲ ದಾಖಲಾಯಿತು. ಅನಂತರ ಸತತ ತಪ್ಪೆಸಗುತ್ತಲೇ ಹೋದ ಶ್ರೀಕಾಂತ್‌ ಡ್ಯಾನಿಶ್‌ ಆಟಗಾರನಿಗೆ ಸಾಟಿಯಾಗಲೇ ಇಲ್ಲ. ಶ್ರೀಕಾಂತ್‌ ಅಂಕ ಏಳರ ಗಡಿ ದಾಟಲಿಲ್ಲ.

ಗೆಲುವಿನ ಹುಮ್ಮಸ್ಸಿನಲ್ಲಿದ್ದ ವಿಕ್ಟರ್‌ ದ್ವಿತೀಯ ಗೇಮ್‌ನಲ್ಲಿ 5-1 ಮುನ್ನಡೆ ಕಾಯ್ದುಕೊಂಡರು. ಶ್ರೀಕಾಂತ್‌ ತಿರುಗಿ ಬಿದ್ದರು. ಡ್ಯಾನಿಶ್‌ ಆಟಗಾರನನ್ನು ಹಿಂದಿಕ್ಕಿ 14-13 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಇದೇ ಪ್ರದರ್ಶನ ಕಾಯ್ದುಕೊಂಡ ಶ್ರೀಕಾಂತ್‌ 18-17 ಮುನ್ನಡೆಯೊಂದಿಗೆ ಜಯಕ್ಕೆ ಹತ್ತಿರವಾದರು. 20-20ರ ಸಮಬಲದ ವೇಳೆ ಪಂದ್ಯ ರೋಚಕ ಘಟ್ಟ ಮುಟ್ಟಿತು. ಅನಂತರ ಶ್ರೀಕಾಂತ್‌ ಸತತ 2 ಅಂಕಗಳನ್ನು ಕಳೆದುಕೊಳ್ಳುವ ಮೂಲಕ ವಿಕ್ಟರ್‌ ವಿಕ್ಟರಿಗೆ ಕಾರಣರಾದರು.

ಇಂತಾನನ್‌ ಚಾಂಪಿಯನ್‌
ವನಿತಾ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ ಚೀನದ ಹೀ ಬಿಂಗ್‌ ಜಿಯಾವೊ ಅವರನ್ನು 21-15, 21-14ರಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next