Advertisement

3 ವರ್ಷಗಳಲ್ಲಿ 10000 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

10:11 PM Nov 03, 2021 | Team Udayavani |

ನವದೆಹಲಿ: ಇಂಡಿಯನ್‌ ಆಯಿಲ್‌ ಕಾರ್ಪೊರೇಟ್‌ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ಭಾರತದಾದ್ಯಂತ ಒಟ್ಟು 10 ಸಾವಿರ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ ಮಾಡುವುದಾಗಿ ತಿಳಿಸಿದೆ.

Advertisement

ಮುಂದಿನ 12 ತಿಂಗಳುಗಳಲ್ಲಿ 2 ಸಾವಿರ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗುವುದು. ಅದಾದ ನಂತರ 2 ವರ್ಷಗಳಲ್ಲಿ 8 ಸಾವಿರ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾಗಿರುವ ಎಸ್‌.ಎಂ.ವೈದ್ಯ ಅವರು ತಿಳಿಸಿದ್ದಾರೆ.

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಕೈ ಹಾಕಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಕಳೆದ ವಾರದಲ್ಲಿ ಟಾಟಾ ಸಂಸ್ಥೆಯು ದೇಶಾದ್ಯಂತ 1 ಸಾವಿರ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯುವ ಕೆಲಸ ಸಂಪೂರ್ಣಗೊಳಿಸಿತ್ತು.

ಇದನ್ನೂ ಓದಿ:ಕೇದರಾನಾಥಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್‌ ಫುಲ್ ಟ್ರೋಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next