ಮುಂಬೈ: ಭಾರತೀಯ ನೌಕಾಪಡೆಯ 5ನೇ ಸ್ಕಾರ್ಪೆನ್ ದರ್ಜೆಯ, ಸುಧಾರಿತ ತಂತ್ರಜ್ಞಾನದ ಜಲಾಂತರ್ಗಾಮಿ ನೌಕೆ “ವಾಗಿರ್’ ಕಾರ್ಯಾಚರಣೆಗೆ ಮುಕ್ತವಾಗಿದೆ.
ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ವಿಡಿಯೊ ಕಾನ್ಫರೆನ್ಸ್ ಮೂಲಕ “ವಾಗಿರ್’ ಅನ್ನು ಮುಂಬೈನ ಮಾಝಗಾಂವ್ ಡಾಕ್‌ನಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
ವಿಶೇಷ ಏನು?: ಭಾರತದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಕಾಲ್ವರಿ ಶ್ರೇಣಿಯ ಸಬ್‌ಮರಿನ್‌ಗಳಲ್ಲಿ ವಾಗಿರ್ ಕೂಡ ಒಂದು. ಫ್ರೆಂಚ್ ನೌಕಾ ಭದ್ರತಾಪಡೆ ಮತ್ತು ಡಿಸಿಎನ್‌ಎಸ್ ಇಂಧನ ಕಂಪನಿ ಇದನ್ನು ವಿನ್ಯಾಸಗೊಳಿಸಿದೆ. ಸಮುದ್ರದ ಮೇಲ್ಮೆ„ ವಿರೋಧಿ ಯುದ್ಧ, ಸಬ್‌ಮರಿನ್ ವಿರೋಧಿ ಯುದ್ಧ, ಗಪ್ತಚರ ಮಾಹಿತಿ ಸಂಗ್ರಹಣೆ ಸಾಮರ್ಥ್ಯದ ವಾಗಿರ್, ಸಮುದ್ರ ಸೀಮೆಗಳ ಮೇಲಿನ ಕಣ್ಗಾವಲಿನಲ್ಲೂ ಬಲು ಚಾಣಾಕ್ಷ.
ಇದನ್ನೂ ಓದಿ:“ಇಂಡಿಯಾ’ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ ಪಬ್‌ಜಿ ಗೇಮ್!
ಹಿಂದೂ ಮಹಾಸಾಗರದ ಆಳದಲ್ಲಿ ಕಂಡುಬರುವ ಸ್ಯಾಂಡ್‌ಫಿಶ್ “ವಾಗಿರ್’ನ ಹೆಸರನ್ನೇ ಈ ಸಬ್‌ಮರಿನ್‌ಗೆ ಇಡಲಾಗಿದೆ. ಭಾರತೀಯ ನೌಕಾಪಡೆಗೆ ಮೊದಲ ವಾಗಿರ್ ಜಲಾಂತರ್ಗಾಮಿಯನ್ನು ರಷ್ಯಾ 1973ರಲ್ಲಿ ಹಸ್ತಾಂತರಿಸಿತ್ತು.