Advertisement

Indian Navy ;ಫ್ರಾನ್ಸ್‌ನಿಂದ 26 ರಫೇಲ್‌, 3 ಜಲಾಂತರ್ಗಾಮಿ ಖರೀದಿ?

08:40 PM Jul 10, 2023 | Team Udayavani |

ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತವು ಶೀಘ್ರದಲ್ಲೇ ಫ್ರಾನ್ಸ್‌ನಿಂದ 26 ರಫೇಲ್‌ ಯುದ್ಧ ವಿಮಾನಗಳು ಹಾಗೂ ಮೂರು ಹೆಚ್ಚುವರಿ ಸ್ಕಾಪೀನ್‌ ದರ್ಜೆಯ ಜಲಾಂತರ್ಗಾಮಿಗಳನ್ನು ಖರೀದಿಸಲಿದೆ. ಜು. 14ರಿಂದ 16ರ ವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್‌ ಪ್ರವಾಸ ನಡೆಸಲಿದ್ದು, ಆಗ ಈ ಕುರಿತ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.

Advertisement

ದೇಶದ ರಕ್ಷಣ ಪಡೆಗಳು ಈಗಾಗಲೇ ರಫೇಲ್‌ ಮತ್ತು ಜಲಾಂತರ್ಗಾಮಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ರಕ್ಷಣ ಸಚಿವಾಲಯಕ್ಕೆ ಸಲ್ಲಿಸಿವೆ. ಅದಕ್ಕೆ ರಕ್ಷಣ ಖರೀದಿ ಮಂಡಳಿ ಸೋಮವಾರ ಒಪ್ಪಿಗೆಯನ್ನೂ ನೀಡಿದೆ. ಭಾರತ-ಫ್ರಾನ್ಸ್‌ ನಡುವಿನ ಈ ಒಪ್ಪಂದಕ್ಕೆ ಸಹಿ ಬಿದ್ದರೆ ನೌಕಾಪಡೆಗೆ 22 ಏಕ ಆಸನದ ರಫೇಲ್‌ ನೌಕಾ ವಿಮಾನಗಳ ಜತೆಗೆ ನಾಲ್ಕು ತರಬೇತಿ ವಿಮಾನಗಳು ದೊರೆಯಲಿವೆ.

ಅಲ್ಲದೆ ಪ್ರಾಜೆಕ್ಟ್ 75ನಡಿ ಮೂರು ಸ್ಕಾಪೀìನ್‌ ದರ್ಜೆಯ ಸಬ್‌ಮರೀನ್‌ಗಳನ್ನೂ ನೌಕಾಪಡೆ ಪಡೆಯಲಿದೆ. ಈ ಖರೀದಿ ವ್ಯವಹಾರದ ಒಟ್ಟು ಮೌಲ್ಯ 90 ಸಾವಿರ ಕೋಟಿ ರೂ.ಗಳಾಗಿದ್ದು, ಒಪ್ಪಂದ ಮಾತುಕತೆ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next