Advertisement

Indian Navy; ಕಡಲ್ಗಳ್ಳರಿಂದ ದಾಳಿಗೊಳಗಾದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ನೌಕಾಪಡೆ

09:18 AM Mar 30, 2024 | Team Udayavani |

ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಇರಾನ್ ಹಡಗಿನ ಮೇಲೆ ನಡೆದ ಕಡಲ್ಗಳ್ಳರ ದಾಳಿಯನ್ನು ಭಾರತೀಯ ನೌಕಾಪಡೆಯು ಯಶಸ್ವಿಯಾಗಿ ಎದುರಿಸಿದ್ದು, ಹಡಗಿನಲ್ಲಿದ್ದ 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯು 12 ಗಂಟೆಗಳ ಕಾಲ ನಡೆದಿದೆ ಎಂದು ವರದಿಯಾಗಿದೆ.

Advertisement

“ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ‘ಅಲ್-ಕಂಬಾರ್ 786’ ನಲ್ಲಿ ಸಂಭಾವ್ಯ ಕಡಲ್ಗಳ್ಳತನ ಘಟನೆಯ ಮಾಹಿತಿಯ ಮೇಲೆ, ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಎರಡು ಭಾರತೀಯ ನೌಕಾಪಡೆಯ ಹಡಗುಗಳನ್ನು ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ತಡೆಯಲು ತಿರುಗಿಸಲಾಯಿತು” ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

“12 ಗಂಟೆಗಳಿಗೂ ಹೆಚ್ಚು ಕಾಲ ತೀವ್ರವಾದ ಬಲವಂತದ ಯುದ್ಧತಂತ್ರದ ಕ್ರಮಗಳ ನಂತರ, ಅಪಹರಿಸಲಾದ ಎಫ್‌ವಿಯಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಯಿತು. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ” ಎಂದು ನೌಕಾಪಡೆ ಹೇಳಿದೆ.

ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ಶುಚಿಗೊಳಿಸಿದವು. ಅದರ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ನಂತರ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಕ್ಕೆ ಅನುಮತಿ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Advertisement

‘ಅಲ್-ಕಂಬಾರ್ 786’ ನಲ್ಲಿ ಅಪಾಯದ ಸೂಚನೆ ಅರಿತ ಐಎನ್ಎಸ್ ಸುಮೇಧ ಮತ್ತು ಐಎನ್ಎಸ್ ತ್ರಿಶೂಲ್ ಅದರತ್ತ ಧಾವಿಸಿ ಕಾರ್ಯಾಚರಣೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next