ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್ ಎಚ್) ಬುಧವಾರ (ಮಾರ್ಚ್ 08) ಮುಂಬೈ ಕರಾವಳಿ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ʼಓಯೋʼ ಸ್ಥಾಪಕ, ಕೋಟ್ಯಧಿಪತಿ ರಿತೇಶ್ ವಿವಾಹ: ಉದ್ಯಮಿಗಳು ಭಾಗಿ; ವೆಡ್ಡಿಂಗ್ ಫೋಟೋಸ್ ವೈರಲ್
ತುರ್ತು ಭೂಸ್ಪರ್ಶ ಘಟನೆ ಕುರಿತು ಭಾರತೀಯ ನೌಕಾಪಡೆ ಟ್ವೀಟರ್ ನಲ್ಲಿ ಸುದ್ದಿಯನ್ನು ಶೇರ್ ಮಾಡಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬಂದಿಗಳನ್ನು ನೌಕಾಪಡೆಯ ಗಸ್ತು ವಿಮಾನ ರಕ್ಷಿಸಿರುವುದಾಗಿ ತಿಳಿಸಿದೆ.
ಭಾರತೀಯ ನೌಕಾಪಡೆಯ ಲಘು ಹೆಲಿಕಾಪ್ಟರ್ ವಾಡಿಕೆಯಂತೆ ತರಬೇತಿಯಲ್ಲಿದ್ದ ವೇಳೆ ಮುಂಬೈ ಕರಾವಳಿ ಪ್ರದೇಶದ ಸಮೀಪ ತುರ್ತು ಭೂಸ್ಪರ್ಶ ಮಾಡಿದ್ದು, ಕೂಡಲೇ ಮೂವರು ಸಿಬಂದಿಗಳನ್ನು ರಕ್ಷಿಸಲಾಯ್ತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಭೂಸ್ಪರ್ಶ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡಲಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಎಲ್ ಎಚ್ ಧ್ರುವ್ ಮಲ್ಟಿ ಕಾರ್ಯಾಚರಣೆಯ ಮಹತ್ವದ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದೆ. ಇದು ಅವಳಿ ಎಂಜಿನ್ ಹೊಂದಿದ್ದು, 5.5 ಟನ್ ಭಾರ ಹೊಂದಿದೆ ಎಂದು ವರದಿ ವಿವರಿಸಿದೆ.