Advertisement

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

07:55 PM Nov 30, 2020 | sudhir |

ಪಣಜಿ: ಗೋವಾ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳ ಹಿಂದೆ ಪತನಗೊಂಡಿದ್ದ ಮಿಗ್‌-29 ಕೆ ವಿಮಾನದ ಕೆಲ ಭಗ್ನಾವಶೇಷಗಳನ್ನು ಭಾರತೀಯ ನೌಕಾಪಡೆಯ ರಕ್ಷಣಾ ತಂಡಗಳು ಪತ್ತೆ ಮಾಡಿವೆ.

Advertisement

ಅರಬ್ಬಿ ಸಮುದ್ರದಲ್ಲಿ ಹಾರಾಟದ ವೇಳೆ ಪತನಗೊಂಡಿದ್ದ ಮಿಗ್‌-19 ಕೆ ವಿಮಾನದ ಕೆಲ ಅವಶೇಷ ಪತ್ತೆಯಾಗಿದೆಯಾದರೂ ಎರಡನೇಯ ಪೈಲಟ್‌ನ ಪತ್ತೆಗೆ ಶೋಧ ನಡೆದಿದೆ. ನ.26ರಂದು ಗೋವಾದಿಂದ ಹೊರಟ ಮಿಗ್‌-29 ಕೆ ತರಬೇತುದಾರ ವಿಮಾನದ ಲ್ಯಾಂಡಿಂಗ್‌ ಗೇರ್‌, ಟರ್ಬೊ ಚಾರ್ಟರ್‌, ಇಂಧನ ಟ್ಯಾಂಕ್‌, ಎಂಜಿನ್‌ ಸೇರಿ ವಿಮಾನದ ಕೆಲ ಭಗ್ನಾವಶೇಷಗಳು ಪತ್ತೆಯಾಗಿವೆ.

ನೌಕಾ ದಳದ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಪತನಗೊಂಡಿರುವ ಯುದ್ಧನೌಕೆ ಶೋಧಿಸಲು ಭಾರತೀಯ ನೌಕಾಪಡೆಯು 14 ನೌಕಾ ವಿಮಾನಗಳು ಮತ್ತು ನೌಕಾ ಪಡೆಯ ಫಾಸ್ಟ್‌ ಇಂಟರ್‌ಸೆಪ್ಟರ್‌ ಕ್ರಾಪ್ಟ್ಗಳನ್ನು ನಿಯೋಜಿಸಿದೆ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬಾಬಾ ಅಮ್ಟೆ ಮೊಮ್ಮಗಳು ಆತ್ಮಹತ್ಯೆ; ಸಾಯುವ ಮುನ್ನ ‘War and Peace’ ಎಂದು ಟ್ವೀಟ್‌

Advertisement

Udayavani is now on Telegram. Click here to join our channel and stay updated with the latest news.

Next